

ವಿಜಯಪುರ : ಜಿಲ್ಲೆಯ ವಿದ್ಯಾರ್ಥಿಗಳು ಎಚ್ಸಿಎಲ್ ಜಿಗ್ಸಾ ರಾಷ್ಟ್ರೀಯ ಸ್ಪರ್ಧೆಯಲ್ಲಿ ಅದ್ಭುತ ಸಾಧನೆಗೈದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ರಾಜ್ಯ ಸರ್ಕಾರ ಹಾಗೂ ಅಗಸ ಸ್ಥಳಿಯ ಕೋರ್ ಸೈನ್ಸ್ ಆಕ್ಟಿವಿಟಿ ಸೆಂಟರ್ ಬೆಂಬಲದಿಂದ ಒಟ್ಟು 214 ವಿದ್ಯಾರ್ಥಿಗಳು ಮೊದಲ ಹಂತದಲ್ಲಿ ಭಾಗವಹಿಸಿದ್ದು, ಅವರಲ್ಲಿ 55 ವಿದ್ಯಾರ್ಥಿಗಳು ದ್ವೀತಿಯ ಹಂತಕ್ಕೆ ಆಯ್ಕೆಯಾಗಿದ್ದರು.
ಸೆಂಟ್ ಜೋಸೆಫ್ ಇಂಗ್ಲಿಷ್ ಮಾಧ್ಯಮ ಶಾಲೆಯ 7ನೇ ತರಗತಿ ವಿದ್ಯಾರ್ಥಿಗಳಾದ ಅಥರ್ವ ಕುಲಕರ್ಣಿ, ಋಷಿ ತನಹಳ್ಳಿ ಮತ್ತು ಪ್ರಾರ್ಥನಾ ಬಾಲಿಗಾರ ರಾಷ್ಟ್ರೀಯ ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದಾರೆ. ಈ ಸಾಧನೆಯೊಂದಿಗೆ ಉತ್ತರ ಕರ್ನಾಟಕದಿಂದ ಅಂತಿಮ ಹಂತ ತಲುಪಿದ ಏಕೈಕ ಜಿಲ್ಲೆ ವಿಜಯಪುರ ಎಂಬ ಗೌರವ ಗಳಿಸಿದೆ.
ವಿದ್ಯಾರ್ಥಿಗಳು "ಇ&ಕಾಮರ್ಸ್ ಡಾರ್ಕ್ ಸ್ಟೋರ್ ಹೈಜಿನ್' ಶೀರ್ಷಿಕೆಯ ಯೋಜನೆ ಆನ್ಲೈನ್ ಗ್ರೋಸರಿ ಮತ್ತು ಫುಡ್ ಡೆಲಿವರಿ ಗೋದಾಮುಗಳಲ್ಲಿ ಸ್ವಚ್ಛತೆ ಮತ್ತು ಗುಣಮಟ್ಟದ ಮಾನದಂಡಗಳನ್ನು ಸುಧಾರಿಸುವುದರ ಮೇಲೆ ಕೇಂದ್ರೀಕರಿಸಿದೆ. ಅಸಮರ್ಪಕ ಸಂಗ್ರಹಣೆ, ಅಡ್ಡಮಾಲಿನ್ಯ, ತಾಪಮಾನ ನಿಯಂತ್ರಣದ ಕೊರತೆ ಮತ್ತು ಅವಧಿ ಮೀರಿದ ಉತ್ಪನ್ನಗಳ ಬಳಕೆ ಮುಂತಾದ ಪ್ರಮುಖ ಸವಾಲುಗಳನ್ನು ಗುರುತಿಸಿದ ತಂಡವು, ಸಾರ್ವಜನಿಕ ಆರೋಗ್ಯ ಮತ್ತು ಗ್ರಾಹಕರ ವಿಶ್ವಾಸದ ಮೇಲೆ ಇದರಿಂದ ಉಂಟಾಗುವ ಪರಿಣಾಮಗಳನ್ನು ವಿಶ್ಲೇಷಿಸಿದೆ. ಈ ಸವಾಲುಗಳನ್ನು ನಿವಾರಿಸಲು, ವಿದ್ಯಾರ್ಥಿಗಳು ರೋಬೋಟಿಕ್ ಕ್ಲೀನರ್ಗಳು, ಕೀಟ ನಿರೋಧಕ ಸಾಧನಗಳು, ಎಐ ಆಧಾರಿತ ತಾಜಾತನ ಅಂದಾಜು ವ್ಯವಸ್ಥೆ, ಸ್ಮಾರ್ಟ್ ಪ್ಯಾಕೇಜಿಂಗ್, ಸ್ವಯಂಚಾಲಿತ ಇನ್ವೆಂಟರಿ ಪರಿಶೀಲನೆ ಮತ್ತು ಮಾನದಂಡಿತ ಹೈಜಿನ್ ಪ್ರೋ ಪ್ರೋಟೋಕಾಲ್ಗಳು ಸೇರಿದಂತೆ ಹಲವು ಹೊಸ ಪರಿಹಾರಗಳನ್ನು ಪ್ರಸ್ತಾಪಿಸಿದ್ದಾರೆ.
ಅಲ್ಲದೆ, ಔರಾ ಡಾರ್ಕ್ ಸ್ಟೋರ್ ಹೆಸರಿನ ಭವಿಷ್ಯ ನಿರೀತ ಮಾದರಿ ಸ್ಟೆರೈಲ್, ಎಐ ಆಧಾರಿತ, ಸ್ವಯಂ ನಿಯಂತ್ರಿತ ವ್ಯವಸ್ಥೆ ರೂಪಿಸುವುದರ ಮೂಲಕ ಉತ್ಪನ್ನದ ಸುರತೆ, ಕಾರ್ಯಮತೆ ಮತ್ತು ತ್ಯಾಜ್ಯವನ್ನು ಕಡಿಮೆ ಮಾಡುವಲ್ಲಿ ಕ್ರಾಂತಿಕಾರಕ ಬದಲಾವಣೆ ತರಬಹುದಾಗಿದೆ. ಸದರಿ ಯೋಜನೆಗೆ ಅಗಸ ಇಂಟರ್ನ್ಯಾಷನಲ್ ಫೌಂಡೇಶನ್ನ ಆಕಾಶ ಮಾರ್ಗದರ್ಶನ ನೀಡಿದ್ದರು.
ವಿದ್ಯಾರ್ಥಿಗಳ ಸಾಧನೆಗೆ ಸರ್ಕಾರಿ ಸಂಪರ್ಕಾಧಿಕಾರಿ ಗೀತಾ ಪಾಟೀಲ ಅಭಿನಂದನೆ ಸಲ್ಲಿಸುವ ಮೂಲಕ ವಿಜಯಪುರಕ್ಕೆ ಇದೊಂದು ಹೆಮ್ಮೆಯ ಣ. ರಾಜ್ಯದ ಎಲ್ಲ ವಿದ್ಯಾರ್ಥಿಗಳಿಗೆ ವಿಾನ ಮತ್ತು ತಂತ್ರಾನ ೇತ್ರದಲ್ಲಿ ಹೊಸ ಆಲೋಚನೆಗಳ ಮೂಲಕ ಸಮಸ್ಯೆ ಪರಿಹಾರ ದಿಸೆಯಲ್ಲಿ ಕೆಲಸ ಮಾಡಲು ಪ್ರೇರಣೆ ನೀಡುತ್ತದೆ ಎಂದು ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
ಎಚ್ಸಿಎಲ್ ಜಿಗ್ಸಾ ರಾಷ್ಟ್ರೀಯ ಸ್ಪರ್ಧೆಯಲ್ಲಿ ಅದ್ಭುತ ಸಾಧನೆಗೈದ ವಿಜಯಪುರದ ವಿದ್ಯಾರ್ಥಿಗಳೊಂದಿಗೆ ಅಗಸ ಇಂಟರ್ನ್ಯಾಷನಲ್ ಫೌಂಡೇಷನ್ದ ಸರ್ಕಾರಿ ಸಂಪರ್ಕಾಧಿಕಾರಿ ಗೀತಾ ಪಾಟೀಲ ಮತ್ತಿತರರಿದ್ದಾರೆ.