

ಧಾರವಾಡ: ಮೈಸೂರು ದಸರಾ ಸಿಎಂ ಕಪ್ ಕ್ರೀಡಾಕೂಟ, ಯುವ ಸಬಲಿಕರಣ ಹಾಗೂ ಕ್ರೀಡಾ ಇಲಾಖೆ, ಕರ್ನಾಟಕ ಒಲಿಂಪಿಕ್ ಅಸೋಸಿಯೇಶನ್ ಆಶ್ರಯದಲ್ಲಿ ಇತ್ತೀಚೆಗೆ ನಡೆದ 30 ಕಿ.ಮೀ. ರೋಡ್ ಮಾಸ್ ಸ್ಟಾರ್ಟ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಜಿಲ್ಲೆಯ ಆಯಿಷಾ ಮೋಮಿನ್ ತೃತೀಯ ಸ್ಥಾನ ಪಡೆದು ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾಳೆ. ಸ್ಪರ್ಧೆಯಲ್ಲಿ 8 ಜಿಲ್ಲೆಗಳಿಂದ 46 ಸ್ಪರ್ಧಾಳುಗಳು ಭಾಗವಹಿಸಿದ್ದರು.
ಸಾಧಕ ಬಾಲಕಿಯನ್ನು ಟೀಮ್ ಮಾನೇಜರ್ ಶಿವಪುತ್ರಪ್ಪ ಕಣವಿ, ಜಿಲ್ಲಾ ಕಾರ್ಯದರ್ಶಿ ಸಚಿನ್ ಕುರಿಯರ್, ರಾಜ್ಯ ಕಾರ್ಯದರ್ಶಿ ಎಸ್.ಎನ್. ಕುರಣಿ, ರಾಜ್ಯ ಉಪಾಧ್ಯಕ್ಷ ಎಂ.ಎಚ್. ಕುರಿಯರ್, ರಾಜ್ಯ ಸಹ ಕಾರ್ಯದರ್ಶಿ ದಿನೇಶ ಜೈನ್‌ಅಭಿನಂದಿಸಿದ್ದಾರೆ.