

ಹಿರೇಕೆರೂರ: ತಾಲೂಕಿನ ಬಾಳಂಬೀಡ ವಲಯಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಯತ್ತಿನಹಳ್ಳಿ ಎಂ.ಕೆ. ಗ್ರಾಮದ ಮಾರುತಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.
ಬಾಲಕ, ಬಾಲಕಿಯರು ಖೋ ಖೋದಲ್ಲಿ ಪ್ರಥಮ, ಬಾಲಕರ ವೈಯಕ್ತಿಕ ಆಟದಲ್ಲಿ 100 ಮೀ, 1500ಮೀ, 200 ಮೀಟರ್ ಓಟದಲ್ಲಿ ಪ್ರಥಮ, ಬಾಲಕಿಯರ ವೈಯುಕ್ತಿಕ ಆಟದಲ್ಲಿ 100 ಮೀ, 800 ಮೀ, 1500 ಮೀ, 200 ಮೀಟರ್ ಓಟದಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದಿದ್ದಾರೆ. ಗುಂಡು ಎಸೆತ, ತ್ರಿವಿಧ ಜಿಗಿತ ಹಾಗೂ ಎತ್ತರ ಜಿಗಿತ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.