

ಕೋಟ: ಇಂದಿನ ಕಾಲ ಮೊದಲಿನಂತ್ತಿಲ್ಲ. ಸಾಕಷ್ಟು ಬದಲಾವಣೆ ಕಂಡಿದ್ದು, ಬಹು ಕ್ಷೇತ್ರದಲ್ಲಿ ಮಹಿಳೆ ಗುರುತಿಸಿಕೊಂಡು ಸಾಧನೆಗೈಯುತ್ತಿದ್ದಾಳೆ. ಇದೊಂದು ಹೊಸ ಅಧ್ಯಾಯಕ್ಕೆ ಮುನ್ನುಡಿ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಕೋಟ ಮಹಿಳಾ ಮಂಡಲ 60ನೇ ವಾರ್ಷಿಕೋತ್ಸವದಲ್ಲಿ ಭಾನುವಾರ ಮಾತನಾಡಿದರು. ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ.ಕುಂದರ್ ಉದ್ಘಾಟಿಸಿದರು. ಶಾಸಕ ಕಿರಣ್ ಕುಮಾರ್ ಕೊಡ್ಗಿ, ಸಂಸದರ ಪರವಾಗಿ ಪತ್ನಿ ಶಾಂತಾ ಶ್ರೀನಿವಾಸ ಪೂಜಾರಿ, ಮಹಿಳಾ ಮಂಡಲ ಮಾಜಿ ಅಧ್ಯಕ್ಷೆ ಯಶೋದಾ ಹಂದೆ, ಮಾಜಿ ಕಾರ್ಯದರ್ಶಿ ಸದಾರಮೆ ಕಾರಂತ್, ಕೊಡವೂರ ನೃತ್ಯನಿಕೇತನ ಮುಖ್ಯಸ್ಥೆ ಮಾನಸಿ ಸುಧೀರ್, ಸುಧೀರ್ ಕೊಡವೂರು, ಮಾಜಿ ಅಧ್ಯಕ್ಷರಾದ ಸುಶೀಲಾ ಹೊಳ್ಳ, ಭಾಗ್ಯವಾದಿರಾಜ್, ಸುಶೀಲಾ ಸೋಮಶೇಖರ್, ಸಂಸ್ಥೆಯ ಪದಾಧಿಕಾರಿ ಭಾರತಿ ವಿ.ಮಯ್ಯ, ಸುಧಾ ಮಣೂರು ಅವರನ್ನು ಗೌರವಿಸಲಾಯಿತು. ಸಂಘದ ಸದಸ್ಯರಾದ ಜ್ಞಾಹ್ನವಿ ಹೇರ್ಳೆ, ವಸಂತಿ ಹಂದಟ್ಟು ಸನ್ಮಾನ ಪತ್ರ ವಾಚಿಸಿದರು.
ಮಹಿಳಾ ಮಂಡಲ ಅಧ್ಯಕ್ಷೆ ಗೀತಾ ಎ.ಕುಂದರ್ ಅಧ್ಯಕ್ಷತೆ ವಹಿಸಿದರು. ಶಾಸಕ ಕಿರಣ್ ಕುಮಾರ್ ಕೊಡ್ಗಿ ಸನ್ಮಾನ ನೆರವೇರಿಸಿದರು. ಕೋಟ ಗ್ರಾಪಂ ಅಧ್ಯಕ್ಷೆ ಜ್ಯೋತಿ ಬಿ.ಶೆಟ್ಟಿ, ಮಹಿಳಾ ಮಂಡಲ ಉಪಾಧ್ಯಕ್ಷೆ ಚಂದ್ರಿಕಾ ಭಟ್ ಮತ್ತಿತರರು ಉಪಸ್ಥಿತರಿದ್ದರು. ಮಹಿಳಾ ಮಂಡಲ ಸದಸ್ಯೆ ಸುಜಾತ ಎಂ.ಬಾಯರಿ ನಿರೂಪಿಸಿದರು. ಮಾಜಿ ಅಧ್ಯಕ್ಷೆ ಸುಶೀಲ ಸೋಮಶೇಖರ್ ಸ್ವಾಗತಿಸಿದರು. ಮಾಜಿ ಅಧ್ಯಕ್ಷೆ ಭಾಗ್ಯವಾದಿರಾಜ್ ವಂದಿಸಿದರು.
ವಿಶೇಷ ಪುರಸ್ಕಾರ ಪ್ರದಾನ
ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಸಾಹಿತಿ ಶಿಕ್ಷಕ ನರೇಂದ್ರ ಕುಮಾರ್ ಕೋಟ, ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಧಾ ಪ್ರಭು ಅವರಿಗೆ ಸಾಧನಾ ಪುರಸ್ಕಾರ ನೀಡಲಾಯಿತು. ಸಾಸ್ತಾನದ ಪಾಂಡೇಶ್ವರ ಮಹಿಳಾ ಮಂಡಲ, ಹಂಗಾರಕಟ್ಟೆ ಬಾಳ್ಕದ್ರು ಮಹಿಳಾ ಮಂಡಲಕ್ಕೆ ವಿಶೇಷ ಪುರಸ್ಕಾರ ನೀಡಲಾಯಿತು.