

ವಿಜಯಪುರ:ಮಹಿಳೆಯರು ಧನಾತ್ಮಕ ಚಿಂತೆನಗಳ ಮೂಲಕ ಬದುಕು ಸುಭದ್ರಗೊಳಿಸಿಕೊಳ್ಳಬೇಕು ಎಂದು ಕಾನೂನು ಮಹಾವಿದ್ಯಾಲಯದ ಪ್ರಾಧ್ಯಾಪಕಿ ಉಜ್ವಲ ಸರನಾಡಗೌಡ ಸಲಹೆ ನೀಡಿದರು.ನಗರದ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸ್ನಾತಕ ಅಧ್ಯಯನ ವಿಭಾಗ 2025&26ನೇ ಸಾಲಿನ ಪ್ರಥಮ ವರ್ಷದ ವಿದ್ಯಾರ್ಥಿನಿಯರ ಸ್ವಾಗತ ಸಮಾರಂಭದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಕೌಟುಂಬಿಕ ಸಮಸ್ಯೆಗಳನ್ನು ನಿಭಾಯಿಸುವ ಜತೆಗೆ ಉತ್ತಮ ಜೀವನ ಕಟ್ಟಿಕೊಳ್ಳಬೇಕು. ಆ ಮೂಲಕವೇ ಮಹಿಳಾ ಸಬಲೀಕರಣ ಆರಂಭವಾಗಲಿದೆ. ವಿದ್ಯಾರ್ಥಿ ಜೀವನದಲ್ಲಿ ಕಠಿಣ ಪರಿಶ್ರಮ ಮತ್ತು ನಿರಂತರತೆ ಕಾಯ್ದುಕೊಳ್ಳುವುದು ಮುಖ್ಯ. ಧನಾತ್ಮಕ ಚಿಂತನೆ ಮೂಲಕ ಸಮಾಜದಲ್ಲಿನ ಪರಿವರ್ತನೆ ಸದಾ ಗಮನಹರಿಸಬೇಕು. ಶಿಸ್ತು, ತಾಳ್ಮೆ, ಸಂಯಮದೊಂದಿಗೆ ಗುರಿ ಸಾಧಿಸಿ ಎಂದು ತಿಳಿಸಿದರು.
ಕುಲಸಚಿವ ಶಂಕರಗೌಡ ಸೋಮನಾಳ ಮಾತನಾಡಿ, ಹೆಣ್ಣು ಮಕ್ಕಳ ಬದುಕು ಮಹಿಳಾ ಸಬಲೀಕರಣದ ಮೇಲೆ ನಿಂತಿದೆ. ವಿದ್ಯಾರ್ಥಿನಿಯರು ಮೊಬೈಲ್ನಿಂದ ದೂರವಿದ್ದು, ಪುಸ್ತಕಗಳನ್ನು ಓದಬೇಕು ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಪ್ರೊ. ಸಕ್ಪಾಲ ಹೂವಣ್ಣ ಮಾತನಾಡಿ, ವಿದ್ಯಾರ್ಥಿನಿಯರು ಬದುಕಿನಲ್ಲಿ ಸಾಮಾನ್ಯ ಜ್ಞಾನವನ್ನು ಹೊಂದಿಕೊಳ್ಳುವುದು ಅತ್ಯಂತ ಅಗತ್ಯವಾಗಿದೆ ಎಂದರು.
ಮೌಲ್ಯಮಾಪನ ಕುಲಸಚಿವ ಪ್ರೊ. ಬಸವರಾಜ ಲಕ್ಕಣ್ಣವರ, ಸ್ಥಾನಿಕ ಅಭಿಯಂತ ಮಾರುತಿ ಕದಮ ಮಾತನಾಡಿದರು. ಸ್ನಾತಕ ಅಧ್ಯಯನ ವಿಭಾಗದ ಸಂಯೋಜಕಿ ಜಿ. ಸೌಭಾಗ್ಯ, ಸಮಾಜಶಾಸ ಅಧ್ಯಯನ ವಿಭಾಗದ ಮುಖ್ಯಸ್ಥ ಎಂ.ಪಿ. ಬಳೆಗಾರ, ಸಾಂಸತಿಕ ಸಂಯೋಜಕಿ ದೀಪಾ ಸೂರ್ಯವಂಶಿ, ವಿದ್ಯಾರ್ಥಿಗಳ ಕಾರ್ಯದರ್ಶಿ ಲಕ್ಷಿ$್ಮ ಕರ್ನಾಳ ಮತ್ತಿತರರಿದ್ದರು.
ಶೃತಿ ಕುಲಕರ್ಣಿ ತಂಡದವರು ಪ್ರಾರ್ಥಿಸಿದರು. ಗೌತಮಿ ನಾಟೇಕರ ಸ್ವಾಗತಿಸಿದರು. ಸ್ಪಂದನಾ ಪರಿಚಯಿಸಿದರು. ಶ್ವೇತಾ, ಗೀತಾ, ವಂದನಾ, ಸಾನಿಯಾ ಮತ್ತು ರೋಹಿಣಿ ನಿರೂಪಿಸಿದರು. ರುಶ್ದಾ ಖಾನಂ ರೂಗಿ ವಂದಿಸಿದರು.
ವಿಜಯಪುರ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ ಹಮ್ಮಿಕೊಂಡಿದ್ದ ಸ್ನಾತಕ ಪ್ರಸಕ್ತ ಸಾಲಿನ ಪ್ರಥಮ ವರ್ಷದ ವಿದ್ಯಾರ್ಥಿನಿಯರ ಸ್ವಾಗತ ಸಮಾರಂಭವನ್ನು ಗಣ್ಯರು ಉದ್ಘಾಟಿಸಿದರು. ಉಜ್ವಲ ಸರನಾಡಗೌಡ, ಶಂಕರಗೌಡ ಸೋಮನಾಳ, ಸಕ್ಪಾಲ ಹೂವಣ್ಣ ಮತ್ತಿತರರಿದ್ದಾರೆ.