ಶೈಕ್ಷಣಿಕ ರಂಗದಲ್ಲಿ ಉನ್ನತ ಸಾಧನೆ ಮಾಡಿ: ಜಿಲ್ಲಾ ಮಾಜಿ ಪ್ರಾಂತಪಾಲ ಪ್ರಕಾಶ್ ಕಾರಂತ್ ಸಲಹೆ

11
Published on

ಮೈಸೂರು: ರೋಟರಿ ಮೈಸೂರು ಅಂಬಾರಿ ಸಂಸ್ಥೆಯ ಪದಗ್ರಹಣ ಸಮಾರಂಭವನ್ನು ನಗರದಲ್ಲಿ ಇತ್ತೀಚೆಗೆ ಆಯೋಜಿಸಲಾಗಿತ್ತು.

ನಗರದ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮೇಜರ್ ಡೋನರ್ ಮತ್ತು ಜಿಲ್ಲಾ ಮಾಜಿ

ಪ್ರಾಂತಪಾಲ ಪ್ರಕಾಶ್ ಕಾರಂತ್ ನೂತನ ಅಧ್ಯಕ್ಷ ಹರೀಶ್ ಮತ್ತು ತಂಡಕ್ಕೆ ಪದವಿ ಪ್ರದಾನ ಮಾಡಿದರು.

ನಂತರ ಮಾತನಾಡಿದ ಪ್ರಕಾಶ್ ಕಾರಂತ್, ಮಕ್ಕಳು ಶೈಕ್ಷಣಿಕ ರಂಗದಲ್ಲಿ ಸಾಧನೆ ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ಎಸ್‌ಎಸ್‌ಎಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು. ಮೈಸೂರಿನ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗೆ 5 ಸಾವಿರ ರೂ. ಸಹಾಯಧನ ನೀಡಲಾಯಿತು. ಸಂಸ್ಥೆ ಹೊರ ತಂದಿರುವ ‘ಪಲ್ಲಕ್ಕಿ- 2025’ ಹೊತ್ತಿಗೆ ಬಿಡುಗಡೆಗೊಳಿಸಲಾಯಿತು.

ಹಿರಿಯ ವಕೀಲ ಡಿ.ಕೆ. ರಾಜಶೇಖರ್‌ಮೂರ್ತಿ, ಸಹಾಯಕ ಪ್ರಾಂತಪಾಲ ಎಸ್.ಎಚ್.ಜಗದೀಶ್, ವಲಯ ಸೇನಾನಿ ಎಂ.ಶಿವಕುಮಾರ್, ಕಾರ್ಯದರ್ಶಿ ವಿ. ಮಂಜುನಾಥ್, ಉಪಾಧ್ಯಕ್ಷ ಪಿ.ಎನ್.ವಿನೋದ್ ಕುಮಾರ್, ನಿರ್ಗಮಿತ ಅಧ್ಯಕ್ಷ ಯದುಕೃಷ್ಣ, ಕ್ಲಬ್ ಸೇವೆ ನಿರ್ದೇಶಕ ಭರತ್, ವೃತ್ತಿ ಸೇವಾ ನಿರ್ದೇಶಕ ಆರ್. ಜಗದೀಶ್, ಸಮುದಾಯ ಸೇವಾ ನಿರ್ದೇಶಕ ಚಂದ್ರಹಾಸ, ಅಂತಾರಾಷ್ಟ್ರೀಯ ಸೇವಾ ನಿರ್ದೇಶಕ ಕೃಷ್ಣ, ಮೆಂಬರ್‌ಶಿಪ್ ಚೇರ್ಮನ್ ಜಗದೀಶ್ ಇದ್ದರು.

ಟಿಆರ್‌ಎಫ್ ಚೇರ್ಮನ್ ಕಿರಣ್ ಕುಮಾರ್, ಜಿಲ್ಲಾ ಯೋಜನಾ ಚೇರ್ಮನ್ ಮನು, ಪಲ್ಸ್ಪೋಲಿಯೋ ಚೇರ್ಮನ್ ಲೋಕೇಶ್, ಐಟಿ ಮತ್ತು ವೆಬ್‌ಸೈಟ್ ಚೇರ್ಮನ್ ಸಂಗೀತಾ, ಪಬ್ಲಿಕ್ ಇಮೇಜ್ ದಿವ್ಯಾಶ್ರೀ, ಖಜಾಂಚಿ ಎಂ. ಶಿವಕುಮಾರ್, ದಂಡಪಾಣಿ ರವಿಚಂದ್ರ ಹಾಗೂ ಹೊಸ ಸದಸ್ಯ ಶಿವಪ್ರಕಾಶ್ ಅಧಿಕಾರ ಗ್ರಹಣ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net