ಸಾಧನೆ ಮಾಡಿ ಮೆಚ್ಚುಗೆ ಗಳಿಸಿ

FotoJet (1)
Published on

ನ್ಯಾಯಾಧೀಶೆ ನೇರಳೆ ವೀರಭದ್ರಯ್ಯ ಭವಾನಿ ಸಲಹೆ ಗಮನಸೆಳೆದ ಬೈಕ್ ರ‌್ಯಾಲಿ

ಚಿಕ್ಕಬಳ್ಳಾಪುರ: ಮಹಿಳಾ ದಿನಾಚರಣೆ ಅಂಗವಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ಮಹಿಳಾ ಪೊಲೀಸರು ಶನಿವಾರ ಬೈಕ್ ರ‌್ಯಾಲಿ ನಡೆಸಿದರು.

ನಗರದ ಸಾರಿಗೆ ಬಸ್ ನಿಲ್ದಾಣದ ಎದುರು ಅಪರಾಧ ನಿಗ್ರಹ, ಟ್ರಾಫಿಕ್ ಜಾಗೃತಿ, ಮಹಿಳಾ ಸಬಲೀಕರಣ ಸಂಕೇತದ ರ‌್ಯಾಲಿಗೆ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶೆ ನೇರಳೆ ವೀರಭದ್ರಯ್ಯ ಭವಾನಿ ಚಾಲನೆ ನೀಡಿದರು.

ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲೂ ಮತ್ತಷ್ಟು ಉತ್ತಮ ಸಾಧನೆಯ ಮೂಲಕ ಮೆಚ್ಚುಗೆಗೆ ಪಾತ್ರರಾಗಲು ಸಲಹೆ ನೀಡಿದರು.

ನಗರದ ಎಂ.ಜಿ.ರಸ್ತೆ, ಬಿ.ಬಿ.ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ದ್ವಿಚಕ್ರ ವಾಹನಗಳಲ್ಲಿ ಮಹಿಳಾ ಪೊಲೀಸರು ಮಾತ್ರ ರ‌್ಯಾಲಿಯಲ್ಲಿ ಸಾಗಿ, ಗಮನ ಸೆಳೆದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ, ಅಪರ ಪೊಲೀಸ್ ವರಿಷ್ಠಾಧಿಕಾರಿ ಇಮಾಮ್ ಖಾಸೀಂ ಮತ್ತಿತರರು ಇದ್ದರು.

ಮ್ಯಾರಥಾನ್

ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ನಮ್ಮ ಪೊಲೀಸ್, ನಮ್ಮ ಹೆಮ್ಮೆ ೋಷಣೆಯೊಂದಿಗೆ ನಗರದ ಸರ್ ಎಂ.ವಿ. ಜಿಲ್ಲಾ ಕ್ರೀಡಾಂಗಣದಲ್ಲಿ ಮಾ.9ರಂದು ಬೆಳಗ್ಗೆ 6ಕ್ಕೆ ಮ್ಯಾರಥಾನ್ ಆಯೋಜಿಸಲಾಗಿದೆ. ಖ್ಯಾತ ಗಾಯಕ ಚಂದನ್ ಶೆಟ್ಟಿ, ಸಿನಿಮಾ ನಟಿಯರಾದ ಸಂಜನಾ ನಾಯ್ಡು, ಅಚ್ಚುಗೌಡ ಭಾಗವಹಿಸಲಿದ್ದು ಹಿರಿಯ ಕಿರಿಯ ಸಿಬ್ಬಂದಿಯೊಂದಿಗೆ ಹೆಜ್ಜೆ ಹಾಕಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net