ಯುಗ ಯುಗಗಳ ನಂಟು ಹೊಂದಿರುವ ಆಚಾರ್ಯ

HLR RENUKACHARYA JAYANTI
Published on

ಹೊಳೆಆಲೂರ: ಭಾರತೀಯ ವೈವಿಧ್ಯಮಯ ಸಂಸ್ಕೃತಿಯಲ್ಲಿ ಭಿನ್ನ-ವಿಭಿನ್ನ ಆಚಾರ, ಪರಂಪರೆ ರೂಢಿಯಲ್ಲಿದ್ದರೂ ಜಾತಿ, ಮತ, ಭಾಷೆ, ಪ್ರದೇಶ ಎಲ್ಲ ಸಂಕುಚಿತ ಸಂಕೋಲೆಗಳನ್ನು ಮೀರಿ ಮಾನವ ಧರ್ಮಕ್ಕೆ ಬೇಕಾದ ಸೈದ್ಧಾಂತಿಕ ತಳಹದಿಯನ್ನು ವೀರಶೈವ ಧರ್ಮಕ್ಕೆ ಕಟ್ಟಿಕೊಟ್ಟ ಶ್ರೇಯಸ್ಸು ಜಗದ್ಗುರು ರೇಣುಕಾಚಾರ್ಯರಿಗೆ ಸಲ್ಲುತ್ತದೆ ಎಂದು ಜಂಗಮಾಭಿವೃದ್ಧಿ ಸಂಘದ ಅಧ್ಯಕ್ಷ ಶೇಖರಗೌಡ ಹಿರೇಮಠ ಪಾಟೀಲ ಹೇಳಿದರು.

ಸ್ಥಳೀಯ ಜಂಗಮಾಭಿವೃದ್ಧಿ ಸಂಘದಿಂದ ಗ್ರಾಮ ಪಂಚಾಯಿತಿ ಆವರಣದಲ್ಲಿ ಬುಧವಾರ ಜರುಗಿದ ಜಗದ್ಗುರು ರೇಣುಕಾಚಾರ್ಯ ಜಯಂತ್ಯುತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಯುಗ ಯುಗಗಳ ನಂಟು ಹೊಂದಿರುವ ಪಂಚಾಚಾರ್ಯರ ಪರಂಪರೆಯಲ್ಲಿ ರೇಣುಕಾಚಾರ್ಯರು ವಿಶಿಷ್ಠ ಸ್ಥಾನ ಹೊಂದಿದ್ದಾರೆ. ನಮ್ಮ ಸಮಾಜದ ಧಾರ್ವಿುಕ ಆಚರಣೆಯಲ್ಲಿ ಪರಸ್ಪರ ಭಿನ್ನತೆ ಇದ್ದರೂ ದೇಶದ ಏಕತೆ ಹಾಗೂ ಸಾಮಾಜಿಕ ಸಾಮರಸ್ಯಕ್ಕಾಗಿ ಪ್ರತಿಯೊಬ್ಬರೂ ಒಂದಾಗಿ ಸಾಗಬೇಕು ಎಂದರು.

ವೀರೇಶ ಮೊಕಾಶಿಮಠ, ದಯಾನಂದ ಪಾರ್ವತಿಮಠ, ಮಲ್ಲಯ್ಯ ಗೌರಿಮಠ, ಮಹೇಶ ಪಾಟೀಲ, ಕುಮಾರ ಭಿಕ್ಷಾವತಿಮಠ, ಕುಮಾರಸ್ವಾಮಿ ವಸ್ತ್ರದ, ಶಶಿಧರ ಮಲ್ಲನಗೌಡ್ರ, ಸುನೀಲಕುಮಾರ ಗೌರಿಮಠ, ಶೇಖಣ್ಣ ಕಪ್ಪರದ, ವಿಜಯಕುಮಾರ ಗದಗ, ವೀರಣ್ಣ ದಳವಾಯಿ, ಮೈಲಾರಪ್ಪ ಚಲವಾದಿ, ವೀರಣ್ಣ ಹರ್ತಿ, ಹನಮಂತ ಬಜೇಂತ್ರಿ, ಯಚ್ಚರಪ್ಪ ಚಲವಾದಿ, ಬಸವರಾಜ ಮೇಟಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net