ವಿನೋಬಾಭಾವೆ ಮಹಾನ್ ಪುರುಷ: ಸಾಹಿತಿ ಡಾ.ಪ್ರದೀಪ್‌ಕುಮಾರ್ ಹೆಬ್ರಿ ಬಣ್ಣನೆ

Acharya Vinoba Bhave Birthday Celebration
Published on

ಮಂಡ್ಯ: ಸರ್ವೋದಯ ಚಳವಳಿಯ ನೇತಾರ ಹಾಗೂ ಭೂದಾನ ಚಳುವಳಿಯ ಅಖಂಡ ನೇತೃತ್ವ ವಹಿಸಿದ್ದ ಆಚಾರ್ಯ ವಿನೋಬಾಭಾವೆ ತಮ್ಮ ಜೀವಮಾನದುದ್ದಕ್ಕೂ ಬಡವರ ಸಂಕಷ್ಟ, ಜನಸಾಮಾನ್ಯರ ನೆರವಿಗೆ ಧಾವಿಸಿದ ಮಹಾನ್ ಪುರುಷರು ಎಂದು ಸಾಹಿತಿ ಡಾ.ಪ್ರದೀಪ್‌ಕುಮಾರ್‌ಹೆಬ್ರಿ ಬಣ್ಣಿಸಿದರು.

ನಗರದ ಗಾಂಧಿಭವನದಲ್ಲಿ ಮಹಾತ್ಮಗಾಂಧಿ ಸ್ಮಾರಕ ಟ್ರಸ್ಟ್ ಹಾಗೂ ಜಿಲ್ಲಾ ಸರ್ವೋದಯ ಮಂಡಲ ವತಿಯಿಂದ ಆಯೋಜಿಸಲಾಗಿದ್ದ ಆಚಾರ್ಯ ವಿನೋಬಾಭಾವೆ ಜನ್ಮದಿನಾಚರಣೆಯಲ್ಲಿ ಮಾತನಾಡಿದ ಅವರು, ಮಹಾತ್ಮ ಗಾಂಧೀಜಿ ಅವರ ನಡೆ, ಸರಳತೆ ಕಾರ್ಯಕ್ಷಮತೆಯ ಬಗ್ಗೆ ವಿನೋಬಾಭಾವೆ ಬಾಲ್ಯದಿಂದಲೇ ಪ್ರೇರೇಪಿತರಾಗಿದ್ದರು. ಸಬರಮತಿ ಆಶ್ರಮದಲ್ಲಿ ಗಾಂಧೀಜಿ ಅವರು ಕೈಗೊಂಡಿದ್ದ ಕಾರ್ಯಗಳನ್ನು ಮತ್ತು ಅವರ ಆದರ್ಶ ಸರಳ ಜೀವನಕ್ಕೆ ಮಾರುಹೋಗಿದ್ದರು ಎಂದರು.

ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಸೇರಿದಂತೆ ಅನೇಕ ರಾಜಕೀಯ ನಾಯಕರಿಗೆ ಜನಸಾಮಾನ್ಯರ ಸಂಕಷ್ಟಗಳ ಬಗ್ಗೆ ಪತ್ರ ಬರೆಯುವುದರ ಮುಖೇನ ವಿನೋಬಾಭಾವೆ ಅವರು ಬಡತನದ ಸಂಕಷ್ಟದಿಂದ ನರಳುತ್ತಿರುವವರ ಪರ ದನಿಯಾದರು. ಅವರ ಜನ್ಮ ದಿನವನ್ನು ಆಚರಿಸಿದರೆ ಮಾತ್ರ ಸಾಲದು. ಬದಲಿಗೆ ಆದರ್ಶ ಕಾರ್ಯಕ್ಷಮತೆಯ ಪ್ರೇರೇಪಣೆ ಪಡೆದು ಉದಾರಿಗಳು ಬಡವರ ಸಂಕಷ್ಟಕ್ಕೆ ನೆರವಾದರೆ ಅದೇ ನಿಜವಾದ ಸಮಾಜ ಸೇವೆ ಎಂದರು.

ಸಾಹಿತಿ ಲಿಂಗಣ್ಣ ಬಂಧೂಕರ್, ಕಸಾಪ ಮಾಜಿ ಅಧ್ಯಕ್ಷ ಎಂ.ವಿ.ಧರಣೇಂದ್ರಯ್ಯ, ಎಂ.ಬಿ.ಬೋರೇಗೌಡ, ಎಂ.ಎಸ್.ಶಿವಪ್ರಕಾಶ್, ಡಾ.ರಾಮಲಿಂಗಯ್ಯ, ನಾಗಾನಂದ, ತೂಬಿನಕೆರೆ ಲಿಂಗರಾಜು, ಡಾ.ಎಸ್.ಶ್ರೀನಿವಾಸಶೆಟ್ಟಿ, ಕೀಲಾರ ಕೃಷ್ಣೇಗೌಡ, ಅನುಪಮ, ಬಿ.ಜಿ.ಉಮಾ, ಕಲಾಶ್ರೀ ವಿದ್ಯಾಶಂಕರ್, ಶಿವಣ್ಣ, ನರಸಿಂಹ, ನೇತ್ರಾವತಿ ಇತರರಿದ್ದರು. ಇದೇ ವೇಳೆ ಮೈಸೂರಿನ ಪ್ರತಿಭೆ ವೇದಿಕೆ ಹೊರ ತಂದಿರುವ ’ಹೆಬ್ರಿ ಸವಿನುಡಿ’ ಕೃತಿಯನ್ನು ಬಿಡುಗಡೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net