ಅಸಾಧಾರಣ ವ್ಯಕ್ತಿತ್ವದ ಆಚಾರ್ಯ ಭಿಕ್ಷು

New Muni New
Published on

ಹುಬ್ಬಳ್ಳಿ : ಆಚಾರ್ಯ ಭಿಕ್ಷು ಅವರ ವ್ಯಕ್ತಿತ್ವ ಅಸಾಧಾರಣವಾಗಿತ್ತು, ಅವರ ಆಧ್ಯಾತ್ಮಿಕ ಅಭ್ಯಾಸ ವಿಶಿಷ್ಟವಾಗಿತ್ತು ಎಂದು ಮುನಿ ವಿನಿತ್ ಕುಮಾರ ಹೇಳಿದರು.

ನಗರದ ತೇರಾಪಂತ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಚಾತುರ್ವಸಿಕ ಧರ್ಮಸಭೆಯಲ್ಲಿ ತೇರಾಪಂತ ಧರ್ಮಸಂಘದ ಸಂಸ್ಥಾಪಕ ಆಚಾರ್ಯಭಿಕ್ಷುಗಳ ತ್ರಿಶತಮಾನೋತ್ಸವ (ಭಿಕ್ಷುಚೇತನವರ್ಷ) ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಆಚಾರ್ಯ ಭಿಕ್ಷುಗಳು ಜಗತ್ತಿಗೆ ಹೊಸ ಮಾರ್ಗ ತೋರಿಸಿದರು. ಅದಕ್ಕಾಗಿಯೇ ಅವರನ್ನು ಇಂದಿಗೂ ಜನರು ನೆನಪಿಸಿಕೊಳ್ಳುತ್ತಾರೆ ಎಂದರು.

ಆಚಾರ್ಯಭಿಕ್ಷು ಸತ್ಯಕ್ಕೆ ಮೀಸಲಾಗಿದ್ದರು. ಅವರು ಸತ್ಯಾನ್ವೇಷಕ ಹಾಗೂ ಉತ್ತಮ ಬರಹಗಾರರಾಗಿದ್ದರು. ಅವರು ತಮ್ಮ ಇಡೀ ಜೀವನದಲ್ಲಿ ಸುಮಾರು 38 ಸಾವಿರ ಶ್ಲೋಕಗಳನ್ನು ರಚಿಸಿದ್ದಾರೆ ಎಂದು ಹೇಳಿದರು.

ಅತಿಥಿಯಾಗಿದ್ದ ಮುರುಸಾವಿರಮಠದ ಜಗದ್ಗುರು ಶ್ರೀ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಮಾತನಾಡಿ, ತೇರಾಪಂತ ಧರ್ಮಸಂಘವು ಸೇವೆ ಮತ್ತು ಶಿಸ್ತಿಗೆ ಹೆಸರುವಾಸಿಯಾಗಿದೆ ಎಂದರು.

ತೇರಾಪಂತ ಸಭಾದ ಅಧ್ಯಕ್ಷ ಪರಸಮಲ್ ಭನ್ಸಾಲಿ, ಮಹಾಸಭಾದ ಕಾರ್ಯಕಾರಿ ಸಮಿತಿ ಸದಸ್ಯ ರಮೇಶ ಚೋಪ್ರಾ, ಹೇಮಲ್ ಚೋಪ್ರಾ, ಭಾಗ್ಯವತಿ ಬಗ್ರೇಚಾ, ಮಹೇಂದ್ರ ಪಾಲ್ಗೋತಾ, ಮಹೇಂದ್ರ ಸಿಂಘಿ, ವಿಶಾಲ್ ಬೋಹ್ರಾ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net