ತನ್ನ ನೌಕರನ ಮೂಲಕ ಖಾಸಗಿ ಫೋಟೊ ತೆಗೆಸಿದ ಆರೋಪ: ವೈದ್ಯನ ವಿರುದ್ಧ ಮಹಿಳೆ ದೂರು

crime
Published on

ಮೈಸೂರು: ‘ತಮ್ಮ ಖಾಸಗಿ ಫೋಟೋ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವ ಮೂಲಕ ಮಾನಹಾನಿ ಮಾಡಿದ್ದಾರೆ’ ಎಂದು ಆರೋಪಿಸಿ ಮಹಿಳೆಯೊಬ್ಬರು ವೈದ್ಯ ಹಾಗೂ ಆತನ ನೌಕರನ ವಿರುದ್ಧ ದೂರು ನೀಡಿದ್ದಾರೆ.
ನಗರದ ದಿವಾನ್ಸ್ ರಸ್ತೆಯ ಖಾಸಗಿ ಕ್ಲಿನಿಕ್‌ನ ಡಾ. ಪ್ರಸನ್ನ ಮತ್ತು ಕ್ಲಿನಿಕ್‌ನ ನೌಕರ ರಾಜು ವಿರುದ್ಧ ದೂರು ನೀಡಿದ್ದು, ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕ್ಲಿನಿಕ್ ಬಳಿ ನಿಂತಿದ್ದ ನನ್ನ ಪೋಟೋಗಳನ್ನು ರಾಜು ತೆಗೆದಿದ್ದು, ಈ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಡಾ. ಪ್ರಸನ್ನ ತೆಗೆಯಲು ಹೇಳಿದ್ದಾರೆ ಎಂದು ತಿಳಿಸಿದ. ಬಳಿಕ ಮೊಬೈಲ್ ಪಡೆದುಕೊಂಡು ಪರಿಶೀಲಿಸಿದಾಗ ನನ್ನ ಖಾಸಗಿ ಪೋಟೋಗಳು ಮೊಬೈಲ್‌ನಲ್ಲಿ ಇದ್ದು, ಬೇರೆವರಿಗೆ ಕಳುಹಿಸುವ ಮೂಲಕ ವೈರಲ್ ಮಾಡಿದ್ದಾರೆ. ಈ ಬಗ್ಗೆ ಪ್ರಶ್ನಿಸಿದಾಗ ಹಲ್ಲೆ ನಡೆಸಲು ಮುಂದಾಗಿದಲ್ಲದೇ, ಮಾನ ಹಾನಿ ಮಾಡಿದ್ದಾರೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net