

ಶಿರಸಿ: ಮಾಜಿ ಸಂಸದ ದೇವರಾಯ ನಾಯ್ಕ ಅವರ ಪತ್ನಿಯ ಕುತ್ತಿಗೆಯಲ್ಲಿದ್ದ ಬಂಗಾರದ ಸರ ಕಿತ್ತು ಪರಾರಿಯಾಗಿದ್ದ ಆರೋಪಿಯನ್ನು ಶಿರಸಿ ಮಾರುಕಟ್ಟೆ ಠಾಣೆ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಹಾನಗಲ್ ತಾಲೂಕಿನ ಸಮ್ಮಸಗಿಯ ಪರಶುರಾಮ ಬಸಪ್ಪ ಸಣ್ಣಮನಿ (30) ಬಂಧಿತ ಆರೋಪಿ.
ಬಂಧಿತನಿಂದ ಕಳ್ಳತನವಾದ 30 ಗ್ರಾಂ ತೂಕದ ಬಂಗಾರದ ಸರ ಹಾಗೂ ಕೃತ್ಯಕ್ಕೆ ಬಳಸಲಾದ ಬೈಕ್ ವಶಕ್ಕೆ ಪಡೆಯಲಾಗಿದೆ.