ಮೇಯಲು ಬಿಟ್ಟ ಹಸು ಕಳ್ಳತನ ಆರೋಪ

Published on

ವಿರಾಜಪೇಟೆ: ನಗರದ ಹೊರವಲಯದಲ್ಲಿ ಮೇಯಲು ಬಿಟ್ಟಿದ್ದ ಹಸು ಮತ್ತು ಎರಡು ಕರುಗಳನ್ನು ಕಳ್ಳತನ ಮಾಡಿ ಸಾಗಿಸಲಾಗಿದೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ವಿರಾಜಪೇಟೆ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿರಾಜಪೇಟೆ ತಾಲೂಕಿನ ಆರ್ಜಿ ಗ್ರಾಮದ ಬಿ.ಎಸ್.ವಿಠಲ ಎಂಬುವರು ಎಂದಿನಂತೆ ಭಾನುವಾರ ಮೇಯಲು ಹಸು ಮತ್ತು ಎರಡು ಕರುಗಳನ್ನು ಊರ ಹೊರಗೆ ಬಿಟ್ಟಿದ್ದರು. ಆದರೆ ಸಂಜೆಯಾಗುತ್ತಿದ್ದಂತೆ ಜಾನುವಾರುಗಳು ಕಾಣದ ಕಾರಣ ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ. ಆದರೆ ಹುಡುಕಾಡ ಮುಂದುವರಿಸಿದ್ದರು.

ಗುಂಡಿಗೆರೆಯ ಉಮ್ಮರ್ ಎಂಬುವರ ಮನೆಯಲ್ಲಿ ಸೋಮವಾರ ಹಸು ಮತ್ತು ಕರುಗಳು ಪತ್ತೆಯಾಗಿವೆ. ಈ ಬಗ್ಗೆ ವಿಠಲ ಅವರು ವಿಚಾರಿಸಿದಾಗ ಪೆರುಂಬಾಡಿ ಗ್ರಾಮದ ಕೆ.ಎನ್.ಉಪೇಂದ್ರ ಎಂಬುವರು 7 ಸಾವಿರ ರೂ.ಗಳಿಗೆ ಎರಡು ದಿನಗಳ ಹಿಂದೆ ಮಾರಾಟ ಮಾಡಿದ್ದಾಗಿ ತಿಳಿಸಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡುವುದಾಗಿ ವಿಠಲ ಅವರು ತಿಳಿಸಿ ಬಂದಿದ್ದರು. ಹೆದರಿದ ಉಮ್ಮರ್ ಅವರ ಮನೆಗೆ ತಂದು ಜಾನುವಾರುಗಳನ್ನು ಬಿಟ್ಟಿದ್ದಾರೆ.

ಹಸು ಕಳವು ಮಾಡಿದ್ದ ಕೆ.ಎನ್.ಉಪೇಂದ್ರ ಅವರ ವಿರುದ್ಧ ವಿರಾಜಪೇಟೆ ಠಾನೆಯಲ್ಲಿ ವಿಠಲ ಅವರು ದೂರು ನೀಡಿದ್ದು, ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net