ಶ್ರೀಗಂಧ ಕಳವು ಮಾಡಿದ ಆರೋಪಿ ಬಂಧನ

10KDR5 (1)
ಶ್ರೀಗಂಧದ ಮರ ಕತ್ತರಿಸಿ ಒಯ್ದಿದ್ದ ರಿಜ್ವಾನ್‌ನನ್ನು ಮಾಲು ಸಮೇತ ಯಗಟಿ ಪೊಲೀಸರು ಬಂಧಿಸಿರುವುದು. ಬೀರೂರು ಸಿಪಿಐ ಶ್ರೀಕಾಂತ್, ಯಗಟಿ ಪಿಎಸ್‌ಐ ಎನ್.ರಂಗನಾಥ್, ಮಹೇಶ್ವರಪ್ಪ, ಉಮೇಶ್ ಇತರರಿದ್ದರು.
Published on

ಕಡೂರು: ಕೇದಿಗೆರೆ ಗ್ರಾಮದ ಜಮೀನಿನಲ್ಲಿ 12 ಶ್ರೀಗಂಧದ ತುಂಡುಗಳನ್ನು ಕಳವು ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಶನಿವಾರ ಯಗಟಿ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಬುಕ್ಕಾಂಬುಧಿ ಸಮೀಪದ ಬಿಲ್ಲಹಳ್ಳಿ ರಿಜ್ವಾನ್ ಬಂಧಿತ ಆರೋಪಿ. 2023 ಜು.8 ಮತ್ತು ಆ.2ರಂದು ತಡರಾತ್ರಿ ಕೇದಿಗೆರೆ ಗ್ರಾಮದ ಹರಕುಮಾರ್ ಎಂಬುವವರ ಜಮೀನಿನಲ್ಲಿ ಬೆಳೆದಿದ್ದ ಶ್ರೀಗಂಧವನ್ನು ಕತ್ತರಿಸಿಕೊಂಡು ಹೋಗಿದ್ದನು.
ಬೀರೂರು ಸಿಪಿಐ ಶ್ರೀಕಾಂತ್ ಮತ್ತು ಯಗಟಿ ಪಿಎಸ್‌ಐ ಎನ್.ರಂಗನಾಥ್ ನೇತೃತ್ವದ ತಂಡ ಶುಕ್ರವಾರ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಬಂಧಿತನಿಂದ 35 ಕೆಜಿ ತೂಕದ 7 ಶ್ರೀಗಂಧದ ತುಂಡುಗಳನ್ನು ವಶಕ್ಕೆ ಪಡಿಸಿಕೊಳ್ಳಲಾಗಿದೆ. ಈತನ ವಿರುದ್ಧ ಶಿವಮೊಗ್ಗ ಮತ್ತು ಅಜ್ಜಂಪುರ ಠಾಣೆಗಳಲ್ಲಿ ವಿವಿಧ ಪ್ರಕರಣಗಳಡಿ ದೂರು ದಾಖಲಾಗಿದೆ. ಕಾರ್ಯಾಚರಣೆಯಲ್ಲಿ ಸಿಬ್ಬಂದಿ ಮಹೇಶ್ವರಪ್ಪ, ಉಮೇಶ್, ಪ್ರದೀಪ್, ಸಿದ್ದೇಶ್, ಕಿರಣ್‌ಕುಮಾರ್, ಶ್ರೀನಿವಾಸ್, ಕಿರಣ್ ನಯಾಜ್, ರಬಾನಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net