ಅಭಿವೃದ್ಧಿ ಸಹಿಸದೆ ಹುರುಳಿಲ್ಲದ ಆರೋಪ: ಏಗನಗೌಡರ

4 Dwd 1 (Aravind Eganagoudar)
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಶಾಸಕ ವಿನಯ ಕುಲಕರ್ಣಿಯವರ ಅಭಿವೃದ್ಧಿ ಕಾರ್ಯ ಸಹಿಸಿಕೊಳ್ಳದ ಬಿಜೆಪಿ ಮುಖಂಡರು ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆಯ ಸದಸ್ಯರ ಅಧಿಕಾರ ಮೊಟಕುಗೊಳಿಸುವ ಗಾಳಿ ಸುದ್ದಿ ಹಬ್ಬಿಸುತ್ತಿರುವುದು ಹಾಸ್ಯಾಸ್ಪದ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ ಏಗನಗೌಡರ ತಿರುಗೇಟು ನೀಡಿದ್ದಾರೆ.

ಪ್ರಕಟಣೆ ನೀಡಿರುವ ಅವರು, ವಿನಯ ಕುಲಕರ್ಣಿ ಅವರು ಈರೇಶ ಅಂಚಟಗೇರಿ ಅವರಿಂದ ಅಭಿವೃದ್ಧಿಯ ಪಾಠ ಕಲಿಯುವ ಅವಶ್ಯಕತೆ ಇಲ್ಲ. ದಶಕದ ಹೋರಾಟ ಮತ್ತು ಶಾಸಕ ವಿನಯ ಕುಲಕರ್ಣಿಯವರ ಇಚ್ಛಾಶಕ್ತಿಯಿಂದ ಧಾರವಾಡದ ಜನತೆಯ ಕನಸು ನನಸಾಗಿದೆ. ಬಿಜೆಪಿ ಸರ್ಕಾರವಿದ್ದಾಗ ಮಾಡಲಾಗದ ಕೆಲಸವನ್ನು ವಿನಯ ಕುಲಕರ್ಣಿಯವರು ಮಾಡಿದ್ದನ್ನು ಅರಗಿಸಿ ಕೊಳ್ಳಲಾಗದೆ, ಸೂಪರ್‌ಸೀಡ್ ಮಾಡಿ ಸದಸ್ಯರ ಅಽಕಾರ ಮೊಟಕುಗೊಳಿಸುವ ಹುನ್ನಾರ ಎಂದು ಜನರ ದಾರಿ ತಪ್ಪಿಸುತ್ತಿದ್ದಾರೆ. ಧಾರವಾಡ ಪಾಲಿಕೆಗೆ ಅಗತ್ಯ ವಿಸ್ತೀರ್ಣ, ಜನಸಂಖ್ಯೆ ಆರ್ಥಿಕ ವ್ಯವಸ್ಥೆ ಇದ್ದುದರಿಂದ ಘೋಷಣೆ ಮಾಡಲಾಗಿದೆ ಎಂಬುದು ಎಲ್ಲರಿಗೂ ಗೊತ್ತು. ಪ್ರಜ್ಞಾವಂತ ಧಾರವಾಡ ಜನತೆ ಎಲ್ಲವನ್ನೂ ಗಮನಿಸುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಧಾರವಾಡ ಮಹಾನಗರ ಪಾಲಿಕೆ ಘೋಷಿಸಿದಾಗ ನಿಮ್ಮ ನಾಯಕರು ಗಲ್ಲಿಗಲ್ಲಿಗಳಲ್ಲಿ ಬ್ಯಾನರ್‌ಗಳನ್ನು ಅಳವಡಿಸಿ ನಾವೇ ಮಾಡಿದ್ದು ಎಂದು ಬೆನ್ನು ಚಪ್ಪರಿಸಿಕೊಂಡ ನಾಟಕವನ್ನು ಯಾರೂ ಮರೆತಿಲ್ಲ. ಬಿಜೆಪಿಯವರು ಇಂಥ ಬಾಲಿಶ ಹೇಳಿಕೆ ಬಿಡಬೇಕು ಎಂದು ಏಗನಗೌಡರ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net