ಕೊಲೆ ಆರೋಪಿ ನೇಣಿಗೆ ಶರಣು

crime
Published on

ಹುಬ್ಬಳ್ಳಿ: ನಗರದ ಗೋಕುಲ ರಸ್ತೆಯ ಸಿಲ್ವರ್ ಟೌನ್​ನಲ್ಲಿ ಇತ್ತೀಚೆಗೆ ನಡೆದಿದ್ದ ಕಟ್ಟಡ ನಿರ್ಮಾಣ ಕಾರ್ವಿುಕನೊಬ್ಬನ ಬರ್ಬರ ಹತ್ಯೆ ಪ್ರಕರಣ ವಿಚಿತ್ರ ತಿರುವು ಪಡೆದಿದೆ.

ಪ್ರಕರಣದ ಆರೋಪಿ ಎನ್ನಲಾದ ನಿರ್ಮಾಣ ಹಂತದ ಕಟ್ಟಡದ ವಾಚಮನ್ ಗುರುವಾರ ಬೆಳಗ್ಗೆ ನೇಣಿಗೆ ಶರಣಾಗಿದ್ದಾನೆ.

ಗದಗ ಜಿಲ್ಲೆಯ ಲಕ್ಷೆ್ಮೕಶ್ವರ ನಿವಾಸಿ ಪರಸಪ್ಪ (60) ನೇಣು ಹಾಕಿಕೊಂಡವರು. ಕಟ್ಟಡ ನಿರ್ವಣದಲ್ಲಿ ತೊಡಗಿಕೊಂಡಿದ್ದ ಮುಂಡಗೋಡ ತಾಲೂಕಿನ ಮುರಡಗಿ ನಿವಾಸಿ ಮೌಲಾಲಿ ಎಂಬಾತ ರಾತ್ರಿ ಮಲಗಿದ್ದ ಸ್ಥಳದಲ್ಲಿ ಹತ್ಯೆಗೀಡಾಗಿದ್ದ. ಮಾರಕಾಸ್ತ್ರಗಳಿಂದ ಆತನನ್ನು ಕೊಲೆಗೈಯಲಾಗಿತ್ತು. ಇಂದು ಬೆಳಗ್ಗೆ ಅದೇ ನಿರ್ಮಾಣ ಹಂತದ ಕಟ್ಟಡದ ವಾಚ್​ವುನ್ ಆಗಿದ್ದ ಆರೋಪಿ ಪರಸಪ್ಪ ಅಪೂರ್ವ ನಗರದ ಪ್ರಮುಖ ರಸ್ತೆಯಲ್ಲಿರುವ ಗಿಡದಲ್ಲಿ ನೇಣು ಹಾಕಿಕೊಂಡಿರುವುದು ಪತ್ತೆಯಾಗಿದೆ. ಗೋಕುಲ ರೋಡ್ ಠಾಣೆ ಪೊಲೀಸರು ತನಿಖೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net