

ಶಿವಮೊಗ್ಗ: ಟಿಪ್ಪುನಗರದ 7ನೇ ತಿರುವಿನಲ್ಲಿ ವ್ಯಕ್ತಿಯ ಮುಖದ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದ ಪ್ರಕರಣ ಭೇದಿಸಿರುವ ತುಂಗಾನಗರ ಠಾಣೆ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ.
ತೌಫಿಕ್ ಅಲಿಯಾಸ್ ಅಸ್ಸು ಬಂಧಿತ ಆರೋಪಿ. ಆ.22ರಂದು ಟಿಪ್ಪುನಗರದಲ್ಲಿ ಮಂಜಣ್ಣ ಎಂಬುವರ ಕೊಲೆ ನಡೆದಿತ್ತು. ಮಂಜಣ್ಣ ಅವರು ಚಿಂದಿ ಆಯುವ ಕೆಲಸ ಮಾಡುತ್ತಿದ್ದರು. ಕೂಲಿ ಕಾರ್ಮಿಕನಾಗಿದ್ದ ತೌಫಿಕ್ ಅಸಹಜ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದು ಅದಕ್ಕೆ ಮಂಜಣ್ಣ ವಿರೋಧಿಸಿದ್ದರು.
ಇದೇ ಕಾರಣಕ್ಕೆ ಮಂಜಣ್ಣನನ್ನು ತೌಫಿಕ್ ಕೊಲೆ ಮಾಡಿ ಪರಾರಿಯಾಗಿದ್ದ ಎಂದು ಶಂಕಿಸಲಾಗಿದೆ. ಈ ಬಗ್ಗೆ ತನಿಖೆ ಕೈಗೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.