ವಕ್ಫ್ ಮೂಲಕ ಲ್ಯಾಂಡ್ ಜಿಹಾದ್ ಆರೋಪ; ಬಿಜೆಪಿಯಿಂದ ಪ್ರತಿಭಟನಾ ಧರಣಿ

22 Dwd 1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ರಾಜ್ಯ ಸರ್ಕಾರ ವಕ್ ಬೋರ್ಡ್ ಮೂಲಕ ರೈತರ ಭೂಮಿ, ಮಠಗಳು ಹಾಗೂ ಜನಸಾಮಾನ್ಯರ ಆಸ್ತಿ ಕಬಳಿಸುತ್ತಿದೆ ಎಂದು ಆರೋಪಿಸಿ ಹು-ಧಾ ಮಹಾನಗರ ಜಿಲ್ಲಾ ಗ್ರಾಮೀಣ ಬಿಜೆಪಿ ಘಟಕದಿಂದ ನಗರದ ಜಿಲ್ಲಾಽಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನಾ ಧರಣಿ ನಡೆಸಲಾಯಿತು.

ರೈತರ ಜಮೀನುಗಳ ಪಹಣಿಯಲ್ಲಿ ವಕ್ ಹೆಸರು ಸೇರಿಸುವ ಮೂಲಕ ರಾಜ್ಯ ಸರ್ಕಾರ ತುಷ್ಟೀಕರಣ ಮಾಡುತ್ತಿದೆ. ನೂರಾರು ವರ್ಷಗಳಿಂದ ಉಳುಮೆ ಮಾಡುತ್ತಿರುವ ಜಮೀನು, ವಾಸಿಸುತ್ತಿರುವ ಜಾಗ, ಶಾಲೆ, ಸರ್ಕಾರಿ ಜಾಗಗಳು, ಹಿಂದು ಧರ್ಮದ ಧಾರ್ಮಿಕ ಕೇದ್ರಗಳನ್ನು ಕಬಳಿಸುವ ಹುನ್ನಾರ ಮಾಡಲಾಗುತ್ತಿದೆ. ರಾಜ್ಯದಲ್ಲಿ ಬೆಲೆ ಏರಿಕೆ, ಭ್ರಷ್ಟಾಚಾರ ಆಡಳಿತದಿಂದ ಅಭಿವೃದ್ಧಿ ಕುಂಠಿತಗೊ0ಡಿದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಹಿಂದಿನ ಹಲವಾರು ಜನಪರ ಯೋಜನೆಗಳನ್ನು ಸ್ಥಗಿತಗೊಳಿಸಿದೆ. ಸಚಿವ ಜಮೀರ ಅಹ್ಮದಖಾನ್ ಅವರು ರಾಜ್ಯದ ಸಾವಿರಾರು ಆಸ್ತಿಗಳನ್ನು ವಕ್‌ಗೆ ವರ್ಗಾ¬ಸುವ ಕುತಂತ್ರ ಮಾಡುತ್ತಿದ್ದಾರೆ. ಅವರಿಗೆ ಸರ್ಕಾರ ಸಹಕಾರ ನೀಡುವ ಮೂಲಕ ಹಿಂದು ವಿರೋಽ ಧೋರಣೆ ಅನುಸರಿಸಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಜಿಲ್ಲಾಧ್ಯಕ್ಷರಾದ ನಿಂಗಪ್ಪ ಸುತಗಟ್ಟಿ, ತಿಪ್ಪಣ್ಣ ಮಜ್ಜಗಿ, ಮಾಜಿ ಶಾಸಕರಾದ ಅಮೃತ ದೇಸಾಯಿ, ಸೀಮಾ ಮಸೂತಿ, ಮಾಜಿ ಮೇಯರ್ ಈರೇಶ ಅಂಚಟಗೇರಿ, ಮುಖಂಡರಾದ ಬಸವರಾಜ ಕುಂದಗೋಳಮಠ, ರಾಜಣ್ಣ ಕೊರವಿ, ಸವಿತಾ ಅಮರಶೆಟ್ಟಿ, ಪಿ.ಎಚ್. ನೀರಲಕೇರಿ, ಸಂತೋಷ ಚವ್ಹಾಣ, ವಿಜಯನಂದ ಶೆಟ್ಟಿ, ಶರಣಬಸವ ಅಂಗಡಿ, ನಿಜನಗೌಡ ಪಾಟೀಲ, ಸಂಗನಗೌಡ ರಾಮನಗೌಡರ, ಶಕ್ತಿ ಹಿರೇಮಠ, ಶಂಕರ ಕೊಮಾರದೇಸಾಯಿ, ರುದ್ರಪ್ಪ ಅರಿವಾಳ, ಜ್ಯೋತಿ ಪಾಟೀಲ, ಮೋಹನ ರಾಮದುರ್ಗ, ಪ್ರಮೋದ ಕಾರಕೂನ, ಮಂಜುನಾಥ ನೀರಲಕಟ್ಟಿ, ಇತರರು ಧರಣಿಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net