15 ವರ್ಷದ ಬಳಿಕ ಕಳವು ಪ್ರಕರಣದ ಆರೋಪಿಗಳು ಅಂದರ್

arrest
Published on

ಮುಂಡರಗಿ: ತಾಲೂಕಿನ ಹಮ್ಮಿಗಿ ಗ್ರಾಮದ ನಾಗೇಂದ್ರಮ್ಮ ಕೋಟೇಶರಾವ್ ಮಾಲಿನಿ ಅವರ ಮನೆಯಲ್ಲಿ 15 ವರ್ಷಗಳ ಹಿಂದೆ ಕಳ್ಳತನ ನಡೆಸಿದ್ದ ಆರೋಪಿಗಳನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ.
ಚಂದ್ರು ರಾಮು ದೊಡ್ಡಮನಿ, ಪುತನಪ್ಪ ಗೋವಿಂದ ದೊಡ್ಡಮನಿ, ರಾಜು ಮಹಾಂತೇಶ ಹರಣಶಿಕಾರಿ ಹಾಗೂ ರಾಮು ಮಹಾಂತೇಶ ಹರಣಶಿಕಾರಿ ಬಂಧಿತರು. ಮನೆಗೆ ನುಗ್ಗಿ ದಂಪತಿಗೆ ಹೊಡೆದು ಚಿನ್ನಾಭರಣಗಳನ್ನು ದರೋಡೆ ಮಾಡಲಾಗಿತ್ತು. ಈ ಬಗ್ಗೆ 12ಮಂದಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಇವರಲ್ಲಿ ಈ ನಾಲ್ವರು 15 ವರ್ಷಗಳಿಂದ ತಲೆಮರೆಸಿಕೊಂಡಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡರ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಂ.ಬಿ. ಸುಂಕದ, ಡಿಎಸ್‌ಪಿ ಪ್ರಭುಗೌಡ ಕಿರೇದಳ್ಳಿ ಮಾರ್ಗದರ್ಶನದಲ್ಲಿ ಸಿಪಿಐ ಮಂಜುನಾಥ ಕುಸುಗಲ್ಲ, ಪಿಎಸ್‌ಐ ಸುಮಾ ಗೊರಬಾಳ ಮತ್ತು ಯೂಸುಫ್ ಜಮುಲಾ ಹಾಗೂ ಸಿಬ್ಬಂದಿ ಮಾ.11ರಂದು ನಾಲ್ವರು ಆರೋಪಿಗಳನ್ನು ಬಂಧಿಸಿದ್ದು, ಬಂಧಿತರು ನ್ಯಾಯಾಂಗ ಬಂಧನದಲ್ಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net