ಆರೋಪಿ ಆತನ ಸ್ನೇಹಿತರಾದ ಸಂಜಯ್ ಮತ್ತು ಸಾಕ್ಷಿ ಶೆಟ್ಟಿ ಎಂಬುವರಿಂದ ಬೆಂಗಳೂರಿನಲ್ಲಿ ಎಂಡಿಎಂಎ ಪಡೆದುಕೊಂಡಿದ್ದು, ಅವರು ಬೆಂಗಳೂರಿನಲ್ಲಿ ನೈಜಿರೀಯನ್ ವ್ಯಕ್ತಿಯಿಂದ ಪಡೆದು ನೀಡಿರುವುದಾಗಿ ಹೇಳಿದ್ದಾನೆ. ಆರೋಪಿಯಿಂದ ಎಂಡಿಎಂಎ ಇರುವ ಚಿಪ್ ಕವರ್ ಮತ್ತು ಚಿಕ್ಕ ಚಿಕ್ಕ ಖಾಲಿ ಜಿಪ್ ಕವರ್ ಗಳು, ತೂಕ ಮಾಪನ ಮೆಷಿನ್ ಮತ್ತು ಪರ್ಸ್ ಇರುವುದು ಕಂಡುಬಂದಿದೆ. ಆರೋಪಿ ಬಳಿ ಸುಮಾರು 7.20ಲಕ್ಷ ರೂ. ಮೌಲ್ಯದ 72ಗ್ರಾಂ ಎಂಡಿಎಂಎ ಇರುವುದು ಪತ್ತೆಯಾಗಿದೆ. ಆರೋಪಿಯಿಂದ 2 ಮೊಬೈಲ್ ೆನ್, ಡಿಜಿಟಲ್ ತೂಕ ಮಾಪನ, ಕಾರು, ಪರ್ಸ್, ಕವರ್ ಸೇರಿದಂತೆ ಒಟ್ಟು 8ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.