ಜೆರಾಕ್ಸ್ ಅಂಗಡಿಯಲ್ಲೇ ತಯಾರಾಗ್ತಿತ್ತು ನಕಲಿ ವೋಟರ್ ಕಾರ್ಡ್; ಚುನಾವಣಾ ಆಯೋಗದ ವೆಬ್​ಸೈಟ್​ ದುರ್ಬಳಕೆ

Voter ID
Published on

ಧಾರವಾಡ: ಮುಂಬರುವ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ಈಗಲೇ ಕಾರ್ಯತಂತ್ರಗಳನ್ನು ರೂಪಿಸಿ ಸಜ್ಜಾಗುತ್ತಿದ್ದರೆ, ಇಲ್ಲೊಂದು ಕಡೆ ನಕಲಿ ಮತದಾರರ ಚೀಟಿಗಳನ್ನೇ ತಯಾರಿಸುವಂಥ ಕೆಲಸವೂ ನಡೆದಿದೆ.

ಧಾರವಾಡದ ಜೆರಾಕ್ಸ್ ಅಂಗಡಿಯೊಂದರಲ್ಲಿ ಹೀಗೆ ನಕಲಿ ವೋಟರ್​ ಐಡಿಗಳನ್ನು ತಯಾರಿಸುತ್ತಿರುವುದು ಪತ್ತೆಯಾಗಿದ್ದು, ಸೈಬರ್ ಕ್ರೈಂ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಧಾರವಾಡದ ಅಂಜುಮಾನ್ ಕಾಂಪ್ಲೆಕ್ಸ್​ನಲ್ಲಿರುವ ಎಂಜೆಆರ್​ ಜೆರಾಕ್ಸ್​ ಅಂಗಡಿಯಲ್ಲಿ ಈ ಕಾನೂನುಬಾಹಿರ ಚಟುವಟಿಕೆ ನಡೆಯುತ್ತಿದ್ದು, ಅಂಗಡಿಯ ಮಹಮ್ಮದ್ ಅಲಿ ಎಂಬಾತನನ್ನು ಬಂಧಿಸಲಾಗಿದೆ.

ಈತ ಚುನಾವಣಾ ಆಯೋಗದ ವೆಬ್‌ಸೈಟ್ ದುರ್ಬಳಕೆ ಮಾಡಿಕೊಂಡು ಅನಧಿಕೃತವಾಗಿ ಮತದಾರರ ಗುರುತು ಚೀಟಿಗಳನ್ನು ತಯಾರಿಸುತ್ತಿದ್ದ. ಸೈಬರ್ ಕ್ರೈಂ ಪೊಲೀಸರು ಆರೋಪಿಯನ್ನು ಬಂಧಿಸುವ ಜತೆಗೆ ಈ ಕೃತ್ಯಕ್ಕೆ ಬಳಸುತ್ತಿದ್ದ ಪ್ರಿಂಟರ್​ ಸೇರಿ ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net