ಹಲ್ಲೆ ಪ್ರಕರಣದ ಆರೋಪಿ ಬಂಧನ

29 Dwd 3
Published on

ಧಾರವಾಡ: ಕಾರ್ ಪಾರ್ಕಿಂಗ್ ವಿಚಾರವಾಗಿ ಬಾಡಿಗೆದಾರ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಮೋಹನ ವಾಳ್ವೇಕರ ಎಂಬಾತನನ್ನು ಉಪನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆ. 19ರಂದು ಇಲ್ಲಿನ ಹೊಯ್ಸಳನಗರದ ಮನೆಯೊಂದರ ಕಂಪೌ0ಡ್ ಬಳಿ ಕಾರ್ ನಿಲ್ಲಿಸಿದ್ದನ್ನು ಕೇಳಿದ್ದ ಬಾಡಿಗೆದಾರ ವಿದ್ಯಾರ್ಥಿ ಹೃಷಿಕೇಶ ತಾಂಗಡೆ ಎಂಬಾತನ ಮೇಲೆ ಮೋಹನ ವಾಳ್ವೇಕರ, ಮಮತಾ, ಯುವರಾಜ ಮತ್ತು ದೇವರಾಜ ಸೇರಿ ಹಲ್ಲೆ ನಡೆಸಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಉಪನಗರ ಠಾಣೆ ಪೊಲೀಸರು, ಮೋಹನ ವಾಳ್ವೇಕರನನ್ನು ಗೋಕಾಕ್‌ನಲ್ಲಿ ಬಂಽಸಿದ್ದಾರೆ. ಉಳಿದವರು ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದ್ದು, ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net