ನಕಲಿ ಬಂಗಾರದ ನಾಣ್ಯ ನೀಡಿ ವಂಚಿಸಿದ್ದ ಆರೋಪಿ ಬಂಧನ

fake gold case
ಶಿರಾಳಕೊಪ್ಪ ಠಾಣೆ ಪೊಲೀಸರು ನಕಲಿ ಬಂಗಾರದ ನಾಣ್ಯ ನೀಡಿ ವಂಚಿಸಿದ್ದ ಪ್ರಕರಣದಲ್ಲಿ 5 ಲಕ್ಷ ರೂ. ಜಪ್ತಿ ಮಾಡಿದರು.
Published on

ಶಿವಮೊಗ್ಗ: ನಕಲಿ ಬಂಗಾರದ ನಾಣ್ಯಗಳು ನೀಡಿ ವ್ಯಕ್ತಿಯೊಬ್ಬರಿಗೆ 5 ಲಕ್ಷ ರೂ. ಪಡೆದು ವಂಚಿಸಿದ್ದ ಆರೋಪಿಯನ್ನು ಶಿರಾಳಕೊಪ್ಪ ಠಾಣೆ ಪೊಲೀಸರು ಬಂಧಿಸಿದ್ದು ಆತನಿಂದ 5 ಲಕ್ಷ ರೂ. ನಗದು ಜಪ್ತಿ ಮಾಡಿದ್ದಾರೆ. ಮತ್ತೊಬ್ಬ ತಲೆಮರೆಸಿಕೊಂಡಿದ್ದಾನೆ.

ಸೊರಬ ತಾಲೂಕಿನ ತತ್ತೂರು ಗ್ರಾಮದ ಚಂದ್ರಪ್ಪ (48) ಬಂಧಿತ. ಹಾಸನ ಜಿಲ್ಲೆ ಇಂಟಿತೊಳಲು ಗ್ರಾಮದ ಕಲ್ಲೇಶ್(52) ಎಂಬುವರು ವಂಚನೆಗೆ ಒಳಗಾಗಿದ್ದವರು.

2024ರ ಡಿ.29ರಂದು ಕಲ್ಲೇಶ್ ಅವರಿಗೆ ಧರ್ಮಸ್ಥಳದಲ್ಲಿ ಆರೋಪಿ ಚಂದ್ರಪ್ಪ ಪರಿಚಿತನಾಗಿದ್ದ. ಜ.16ರಂದು ಕ್ಲಲೇಶ್‌ಗೆ ಫೋನ್ ಮಾಡಿ ಮನೆ ಪಕ್ಕದ ಜಾಗದಲ್ಲಿ ಪಾಯ(ಫೌಂಡೇಶನ್) ತೆಗೆಯುವಾಗ 3 ಕೆಜಿ ಬಂಗಾರದ ನಾಣ್ಯಗಳು ಸಿಕ್ಕಿವೆ. ಅವುಗಳನ್ನು ಮಾರಾಟ ಮಾಡುತ್ತೇವೆಂದು ಚಂದ್ರಪ್ಪ ಹೇಳಿದ್ದ. ಆತನ ಮಾತು ನಂಬಿದ್ದ ಕಲ್ಲೇಶ್, ಶಿರಾಳಕೊಪ್ಪಕ್ಕೆ ಬಂದು ಚಂದ್ರಪ್ಪ ಮತ್ತು ನವೀನ್ ಎಂಬುವರು ನೀಡಿದ ಒಂದು ಬಂಗಾರದ ನಾಣ್ಯ ಪಡೆದು ತನ್ನೂರಿಗೆ ತೆರಳಿ ಪರಿಶೀಲಿಸಿದಾಗ ಅದು ಅಸಲಿಯಾಗಿತ್ತು.

ಜ.8ರಂದು ಪುನಃ ಶಿರಾಳಕೊಪ್ಪಕ್ಕೆ ಬಂದ ಕಲ್ಲೇಶ್, ಚಂದ್ರಪ್ಪ ಮತ್ತು ನವೀನ್ ಅವರಿಗೆ 5 ಲಕ್ಷ ರೂ. ನೀಡಿ 800 ಗ್ರಾಂ ನಾಣ್ಯಗಳನ್ನು ಪಡೆದು ತೆರಳಿದ್ದರು. ಅವುಗಳನ್ನು ಪರಿಶೀಲಿಸಿದಾಗ ನಕಲಿ ಎಂಬುದು ಗಮನಕ್ಕೆ ಬಂದಿತ್ತು. ಈ ಬಗ್ಗೆ ಕಲ್ಲೇಶ್, ಶಿರಾಳಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಎಸ್‌ಪಿ ಜಿ.ಕೆ.ಮಿಥುನ್‌ಕುಮಾರ್ ಮಾರ್ಗದರ್ಶನದಲ್ಲಿ ಶಿಕಾರಿಪುರ ಡಿವೈಎಸ್‌ಪಿ ಕೇಶವ್, ಶಿಕಾರಿಪುರ ಸಿಪಿಐ ರುದ್ರೇಶ್ ಮೇಲ್ವಿಚಾರಣೆಯಲ್ಲಿ ಶಿರಾಳಕೊಪ್ಪ ಠಾಣೆ ಪಿಎಸ್‌ಐ ಪ್ರಶಾಂತ್ ನೇತೃತ್ವದ ಸಿಬ್ಬಂದಿಗಳಾದ ಸಂತೋಷ್‌ಕುಮಾರ್, ಸಲ್ಮಾನ್, ರಾಕೇಶ್, ಕಾರ್ತಿಕ್, ಕಾಂತೇಶ್, ಗುರುರಾಜ್, ಇಂದ್ರೇಶ್ ಹಾಗೂ ವಿಜಯ್ ಅವರನ್ನೊಳಗೊಂಡ ತನಿಖಾ ತಂಡ ಕಾರ್ಯಾಚರಣೆ ನಡೆಸಿ ಬುಧವಾರ ಆರೋಪಿಯನ್ನು ಬಂಧಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net