ಬೆಳಗ್ಗೆ ಕದ್ದ ರಾತ್ರಿ ಸಿಕ್ಕಿ ಬಿದ್ದ

accused arrest
Published on

ಕಾರವಾರ: ಬೆಳ್ಳಂ ಬೆಳಗ್ಗೆ ಇಲ್ಲಿ‌ನ ಲಂಡನ್‌ ಬ್ರಿಜ್ ಬಳಿಯ ತಾತ್ಕಾಲಿಕ ಮೀನು ಮಾರುಕಟ್ಟೆಯ ಸಮೀಪ ಬೈಕ್‌ನಲ್ಲಿ ಬಂದು ಬ್ಯಾಗ್‌ನಲ್ಲಿದ್ದ ಹಣ ಕಳ್ಳತನ ಮಾಡಿದ ಆರೋಪಿಯನ್ನು ಇಲ್ಲಿನ ಶಹರ ಠಾಣೆ ಪೊಲೀಸರು ಕೆಲವೇ ಗಂಟೆಗಳಲ್ಲಿ ಬಂಧಿಸಿದ್ದಾರೆ.
ಕೋಣೆವಾಡದ ಹಜರತ್ ಅಲಿ ಬಂಧಿತ. ಆತನಿಂದ ಒಂದು ಕಾರು ಹಾಗೂ ನಗದು ಹಣವನ್ನು ವಶಕ್ಕೆ ಪಡೆಯಲಾಗಿದೆ.

ಮಂಗಳವಾರ ಬೆಳಗ್ಗೆ ಹುಬ್ಬಳ್ಳಿಯ ವ್ಯಾಪಾರಿ ನಾಸಿರ್ ಹುಸೇನ್ ಎಂಬುವವರ ಕೈಯ್ಯಿಂದ ಹಣ ಕಳ್ಳತನವಾಗಿತ್ತು.

ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿದ್ದರು.

ಪಿಐ ಸಿದ್ದಪ್ಪ ಬಿಳಗಿ, ಅಪರಾಧ ವಿಭಾಗದ ಪಿಎಸ್‌ಐ ಕುಮಾರ ಕಾಂಬ್ಳೆ, ಹೆಡ್ ಕಾನ್‌ಸ್ಟೇಬಲ್ ಸೂರಜ್ ಕೊಠಾರಕರ್, ಪಿಸಿ ರಾಜೇಶ ನಾಯಕ, ನಾಮದೇವ ನಾಂದ್ರೆ, ಮುಕಾದಮ್ ಸಾಬ್ ಪತೇಕಾನ್, ರಮೇಶ ನಿಂಬರಗಿ ಒಳಗೊಂಡ ತಂಡವು ಕಾರ್ಯಾಚರಣೆ ನಡೆಸಿ ರಾತ್ರಿಯೊಳಗೆ ಆರೋಪಿಯನ್ನು ಬಂಽಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net