ತಾಸುಗಳೊಳಗೆ ಕಳವು ಆರೋಪಿ ಬಂಧನ

arrested
Published on

ಕಾಸರಗೋಡು: ಉಪ್ಪಳದಲ್ಲಿ ನಿರ್ಮಾಣ ಹಂತದ ಮನೆಯಿಂದ 50 ಸಾವಿರ ರೂ. ಮೌಲ್ಯದ ವಿದ್ಯುತ್ ಉಪಕರಣ ಕಳವುಗೈದ ಆರೋಪಿ ಉಪ್ಪಳ ಪೆರಿಂಗಡಿ ಜನಪ್ರಿಯ ನಿವಾಸಿ ಮಹಮ್ಮದ್ ಇಕ್ಬಾಲ್ ಎಂಬಾತನನ್ನು ಮಂಜೇಶ್ವರ ಠಾಣೆ ಪೊಲೀಸರು ತಾಸುಗಳ ಒಳಗಾಗಿ ಬಂಧಿಸಿದ್ದಾರೆ. ಮನೆಯಿಂದ ವಿದ್ಯುತ್ ಉಪಕರಣ ಕಳವಾಗಿರುವ ಬಗ್ಗೆ ಮನೆ ಮಾಲೀಕ ಅಬ್ದುಲ್ ರಜಾಕ್ ನೀಡಿರುವ ದೂರು ದಾಖಲಿಸಿಕೊಂಡ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net