

ಚಿಕ್ಕಬಳ್ಳಾಪುರ: ಮಂಚೇನಹಳ್ಳಿಯಲ್ಲಿ ಗಣಿಗಾರಿಕೆ ಪರವಾನಗಿ ವಿಚಾರವಾಗಿ ಸಂಸದ ಡಾ ಕೆ.ಸುಧಾಕರ್ ಹಾಗೂ ಪ್ರದಿಪ್ ಈಶ್ವರ್ ಅಯ್ಯರ್ ಬಣದ ನಡುವೆ ಆರೋಪ ಪ್ರತ್ಯಾರೋಪಗಳು ಜೋರಾಗಿದೆ.
ಕ್ರಷರ್ ಮಾಲೀಕರು ಬಿಜೆಪಿಗೆ ಸೇರಿದವರು, ೈಯರಿಂಗ್ ಮಾಡಿದವರು ಬಿಜೆಪಿ, ಕ್ರಷರ್ಗೆ ಅನುಮತಿ ಕೊಟ್ಟವರು ಬಿಜೆಪಿಯವರು ಎಂಬ ಮಾಹಿತಿಯೊಂದಿಗೆ ಪೋಟೋ ಹಾಗೂ ದಾಖಲೆಯನ್ನು ಶಾಸಕ ಬಣದವರು ಬಿಡುಗಡೆಗೊಳಿಸಿದ್ದಾರೆ.
ಸಂಸದರೇ ಮಂಚೇನಹಳ್ಳಿ ಕ್ರಷರ್ಗೆ 2021 ರಲ್ಲಿ ಅನುಮತಿ ಕೊಡಿಸಿದ್ದು ಜನರಿಗೆ ದ್ರೋಹ ಬಗೆದಿದ್ದಾರೆ ಎಂದು ಆರೋಪಿಸಿದ್ದಾರೆ. ಇದಕ್ಕೂ ಮೊದಲು ಪರೋಕ್ಷ$ವಾಗಿ ಶಾಸಕರು, ಜಿಲ್ಲಾಡಳಿತದ ವಿರುದ್ಧ ಆರೋಪಿಸಿದ್ದರು. ಊರಿಗೆ ಹೋಗಿ ಡೈಲಾಗ್ ಹೊಡೆದು ವ್ಯಕ್ತಿ ಗಣಿಗಾರಿಕೆ ನಿಲ್ಲಿಸಿಲ್ಲ. ಹಿಂದೆ ನನ್ನ ಅವಧಿಯಲ್ಲಿ ಒತ್ತಡ ಬಂದಿದ್ದರೂ ಅವಕಾಶ ಕೊಡಿಸಿರಲಿಲ್ಲ ಎಂದು ಸಂಸದ ಡಾ ಕೆ.ಸುಧಾಕರ್ ಹೇಳಿದ್ದರು.
*ಎಂಎಲ್ಸಿ ಸಂಬಂಧಿ?
ಆರೋಪಿ ಸಕಲೇಶ್ ವಿಧಾನಪರಿಷತ್ ಮಾಜಿ ಸದಸ್ಯ ವೈ.ಎ.ನಾರಾಯಣಸ್ವಾಮಿ ಸಂಬಂಧಿ. ಕಳೆದ 2021 ರ ಅ.26 ರಲ್ಲಿ ಬಿ.ಎನ್.ಉಷಾ ನಂದಿನಿ ಹೆಸರಿನಲ್ಲಿ ಮಂಚೇನಹಳ್ಳಿ ಬಳಿ ಗಣಿಗಾರಿಕೆಗೆ ಪರವಾನಗಿ ನೀಡಲಾಗಿತ್ತು ಎಂದು ಶಾಸಕರ ಬಣ ಆರೋಪಿಸಿದೆ.
*ಆರೋಪಿಯ ಬಂಧನ
ಮಂಚೇನಹಳ್ಳಿಯಲ್ಲಿ ಶೂಟ್ ಔಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಗಣಿ ಮಾಲೀಕ ಸಕಲೇಶ್ (45) ಬಂಧಿತ. ಪಿಸ್ತೂಲ್ನಿಂದ ರೈತ ರವಿಗೆ ಶೂಟ್ ಮಾಡಿ ಪರಾರಿಯಾಗಿದ್ದು ರೈತ ಸಂಟನೆಗಳಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಕಾರ್ಯಾಚರಣೆ ಕೈಗೊಂಡ ಪೊಲೀಸರು ಬೆಂಗಳೂರಿನತ್ತ ಕಾರಿನಲ್ಲಿ ತೆರಳುತ್ತಿದ್ದ ಆರೋಪಿಯನ್ನು ಮಾರ್ಗಮಧ್ಯೆ ಬಂಧಿಸಿದ್ದಾರೆ.
*ಠಾಣೆಯ ಎದುರು ವಾಗ್ವಾದ
ಮಂಚೇನಹಳ್ಳಿ ಠಾಣೆಯ ಮುಂಭಾಗ ಸ್ಥಳಿಯರು ಪ್ರತಿಭಟಿಸಿದ ಸಂದರ್ಭದಲ್ಲಿ ಪೊಲೀಸರು ಮತ್ತು ಹೋರಾಟಗಾರರ ನಡುವೆ ವಾಗ್ವಾದ ನಡೆಯಿತು. ಪ್ರತಿಭಟನೆಗೆ ಅನುಮತಿ ಪಡೆದಿಲ್ಲ. ಗಣಿಗಾರಿಕೆಗೆ ವಿರೋಧವಿದ್ದರೆ ಕಾನೂನು ಪ್ರಕಾರ ನಡೆದುಕೊಳ್ಳಬೇಕಾಗಿತ್ತು ಎಂದು ವೃತ್ತ ನಿರೀಕ್ಷಕ ಸತ್ಯನಾರಾಯಣ ಅಸಮಾಧಾನ ವ್ಯಕ್ತಪಡಿಸಿದರು.
ಪ್ರತಿಭಟನೆಯ ನೇತೃತ್ವವನ್ನು ಜಿ.ಪಂ.ಮಾಜಿ ಸದಸ್ಯ ಪಿ.ಎನ್.ಪ್ರಕಾಶ್, ವಕೀಲ ಲಕ್ಷಿ$್ಮನಾರಾಯಣ್ ಮತ್ತಿತರರು ವಹಿಸಿದ್ದರು.