

ಸುನಿಲ್ ಪೊನ್ನೇಟಿ ಮಡಿಕೇರಿ
ಈ ತನಕ ಗ್ರಾಮ ಪಂಚಾಯಿತಿ ಆಗಿದ್ದ ತಾಲೂಕು ಕೇಂದ್ರ ಪೊನ್ನಂಪೇಟೆಯನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಿಸುವ ಸಂಬಂಧ ಪ್ರಕ್ರಿಯೆಗಳು ಚುರುಕಾಗಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ’ಪೊನ್ನಂಪೇಟೆ ಪರಿವರ್ತನಾ ಪ್ರದೇಶ’ ಎಂದು ಉದ್ಘೋಷಿಸಲಾಗಿದ್ದು ಈ ಪರಿವರ್ತನಾ ಪ್ರದೇಶವನ್ನು ’ಪೊನ್ನಂಪೇಟೆ ಪಟ್ಟಣ ಪಂಚಾಯಿತಿ’ ಪ್ರದೇಶ ಎಂದು ಹೆಸರಿಸಲು ಮತ್ತು ಇಲ್ಲಿ ’ಪಟ್ಟಣ ಪಂಚಾಯಿತಿ’ ಸ್ಥಾಪಿಸುವ ಸಂಬಂಧ ರಾಜ್ಯಪತ್ರದಲ್ಲಿ ಅಧಿಸೂಚನೆ ಹೊರಡಿಸಲಾಗಿದೆ. ಇದಕ್ಕೆ ಆಕ್ಷೇಪಣೆಗಳು ಇದ್ದರೆ ಇನ್ನು ಒಂದು ತಿಂಗಳ ಒಳಗೆ ಸರ್ಕಾರಕ್ಕೆ ಸಲ್ಲಿಸಬಹುದಾಗಿದೆ.
೨೦೧೯ರ ಮಾರ್ಚ್ ೨ ರಂದು ಕುಶಾಲನಗರ ಮತ್ತು ಪೊನ್ನಂಪೇಟೆ ನೂತನ ತಾಲೂಕುಗಳನ್ನು ಘೋಷಣೆ ಮಾಡಲಾಗಿತ್ತು. ಅದಾಗಲೇ ತಾಲೂಕು ಕೇಂದ್ರ ಕುಶಾಲನಗರದ ಸ್ಥಳೀಯ ಆಡಳಿತ ಗ್ರಾಮ ಪಂಚಾಯಿತಿಯಿಂದ ಪಟ್ಟಣ ಪಂಚಾಯಿತಿಗೆ ಮೇಲ್ದರ್ಜೆಗೆ ಏರಿತ್ತು. ಈಗ ಪುರಸಭೆಯಾಗಿ ಕಾರ್ಯ ನಿರ್ವಹಿಸುತ್ತಿದೆ. ಆದರೆ ಗ್ರಾಮ ಪಂಚಾಯಿತಿಯಾಗಿಯೇ ಉಳಿದುಕೊಂಡಿದ್ದ ತಾಲೂಕು ಕೇಂದ್ರ ಪೊನ್ನಂಪೇಟೆ ಪಟ್ಟಣ ಪಂಚಾಯತಿಯಾಗಿ ಮೇಲ್ದರ್ಜೆಗೆ ಏರಲು ದಿನಗಣನೆ ಶುರುವಾಗಿದೆ. ಸರ್ಕಾರದ ನಿಯಮಾವಳಿಗಳ ಪ್ರಕಾರ ೧೦ ಸಾವಿರಕ್ಕಿಂತ ಕಡಿಮೆ ಇಲ್ಲದ, ೨೦ ಸಾವಿರ ಮೀರದ ಜನಸಂಖ್ಯೆ ಹೊಂದಿರುವ, ಒಂದು ಚದರ ಕಿಲೋಮೀಟರ್‌ಗೆ ನಾನೂರಕ್ಕೂ ಕಡಿಮೆ ಜನಸಾಂದ್ರತೆ ಇರದ, ಕೃಷಿಯೇತರ ಚಟುವಟಿಕೆಗಳಲ್ಲಿನ ಉದ್ಯೋಗದ ಶೇಕಡಾವಾರು ಒಟ್ಟು ಉದ್ಯೋಗದ ಶೇಕಡ ಐವತ್ತಕ್ಕಿಂತ ಕಡಿಮೆಯಿಲ್ಲದ ಪ್ರದೇಶವಾಗಿರುವ ಪೊನ್ನಂಪೇಟೆಗೆ ಪಟ್ಟಣ ಪಂಚಾಯಿತಿಯನ್ನಾಗಿ ಬಡ್ತಿ ನೀಡಲು ಸರ್ಕಾರ ಮುಂದಾಗಿದೆ.
ಅರುವತ್ತೊಕ್ಕಲುವಿಗೆ ಸೇರಿದ ನೆಹರೂ ಕಾಲೋನಿ ಒಳಗೊಂಡಂತೆ ಭಾಗಶಃ ಅರುವತ್ತೊಕ್ಕಲು ಗ್ರಾಮ, ಹಳ್ಳಿಗಟ್ಟುವಿಗೆ ಸೇರಿದ ಗಣಪತಿನಗರ, ಶಾಂತಿನಗರ, ಮೈತ್ರಿ ಲೇಔಟ್, ಎಂಜಿ ನಗರ, ನಿಸರ್ಗನಗರ ಸೇರಿದಂತೆ ಭಾಗಶಃ ಹಳ್ಳಿಗಟ್ಟು ಗ್ರಾಮ, ಜನತಾಕಾಲೋನಿ, ದತ್ತಾ ಕರುಂಬಯ್ಯ ಬಡಾವಣೆ. ತ್ಯಾಗರಾಜ ರಸ್ತೆ, ಶಿವಕಾಲೋನಿ, ದೇಚಮ್ಮ ಬಡಾವಣೆ, ಕಾಮತ್ ಬಡಾವಣೆ, ಕಾವೇರಿ ನಗರ ಸೇರಿದಂತೆ ಭಾಗಶಃ ಮತ್ತೂರು ಗ್ರಾಮ, ಕೃಷ್ಣನಗರ, ಕಾಟ್ರಕೊಲ್ಲಿ ಸೇರಿದಂತೆ ಭಾಗಶಃ ಹುದೂರು ಗ್ರಾಮ, ಕಲ್ಲುಕೋರೆ ತಣ್ಣಿಕೋಡ್, ಭಗವತಿನಗರ, ಪೊನ್ನಪ್ಪ ಲೇಔಟ್, ವಿಜಯನಗರ ಸೇರಿದಂತೆ ಭಾಗಶಃ ಮುಗುಟಗೇರಿ ಗ್ರಾಮ ಹಾಗೂ ಬಲ್ಯಮಂಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾನೂರು ರಸ್ತೆ ಕಾಲೋನಿ, ಮಾಪಿಳ್ಳೆತೋಡು ಸೇತುವೆ, ಕಾವೇರಮ್ಮ ಬಡಾವಣೆ ಮತ್ತು ಇತರ ಬಡಾವಣೆಗಳನ್ನು ಒಳಗೊಂಡಂತೆ ಸಂಪೂರ್ಣ ಮುಗುಟಗೇರಿ ಗ್ರಾಮವನ್ನು ಪ್ರಸ್ತಾವಿತ ಪೊನ್ನಂಪೇಟೆ ಪಟ್ಟಣ ಪಂಚಾಯಿತಿಗೆ ಸೇರಿಸಲಾಗಿದೆ.
ಪೊನ್ನಂಪೇಟೆ ಗ್ರಾಮ ಪಂಚಾಯಿತಿಯ ಉತ್ತರ ದಿಕ್ಕಿನ ಗಡಿಯ ಸರಹದ್ದು ಅರುತೊಕ್ಕಲು ಗ್ರಾಮದ ಸ.ನಂ. ೧೩೯ರಿಂದ ಪ್ರಾರಂಭಗೊಂಡು ಪೂರ್ವಾಭಿಮುಖವಾಗಿ ಸಾಗಿ ಸ.ನಂ. ೧೩೮/೧, ೧೪೨/೬, ೧೪೪/೨, ೧೭೧/೫, ೧೭೧/೩, ೧೭೪/೧೦, ೧೬೩/೨ ರಿಂದ ಮುಂದುವರಿದು, ಸ.ನಂ.೧೬೩/೧ರ ಕಡಂಗವನ್ನು ಒಳಗೊಂಡಂತೆ ಮತ್ತೂರು ಗ್ರಾಮದ ಸ.ನಂ.೧/೧೦ ರಿಂದ ಬಾಳಾಜಿ ಗ್ರಾಮದ ಗಡಿಯ ಮೂಲಕ ಹಾದು ಸ.ನಂ.೧/೧, ೧/೩, ೧/೪, ೧/೫, ೧/೬ ರ ಪ್ರದೇಶಗಳನ್ನು ಒಳಗೊಂಡು ಮತ್ತೂರು ಗ್ರಾಮದ ಸ.ನಂ.೧/೨ರ ಪ್ರದೇಶದಲ್ಲಿ ಅಂತ್ಯಗೊಳ್ಳುತ್ತದೆ.
ಪೂರ್ವ ದಿಕ್ಕಿನ ಗಡಿಯ ಸರಹದ್ದು ಮತ್ತೂರು ಗ್ರಾಮದ ಭಾಗಶಃ ಪ್ರದೇಶ ಸ.ನಂ.೧/೨ ರಿಂದ ಪ್ರಾರಂಭಗೊಂಡು ಬಾಳಾಜಿ ಗ್ರಾಮದ ಗಡಿ ಮೂಲಕ ದಕ್ಷಿಣಾಭಿಮುಖವಾಗಿ ಚಲಿಸಿ ಸ.ನಂ. ೩/೪, ೩/೧, ೫/೩, ೫/೧೦, ೫/೮, ೫/೫, ೫/೨, ೫/೧೧, ೫/೩, ೫/೭, ೫/೪, ೯/೧, ೯/೨. ೧೦/೧೨, ೧೦/೧೩, ೧೦/೧೪, ೧೦/೨, ೧೦/೮, ೧೦/೩, ೬೮/೧, ೬೪, ೫೮, ೯೧/೪, ೯೧/೧, ೯೨/೪, ೫೩, ೪೬/೨, ೪೮/೧. ೪೪/೩, ೪೪/೧, ೪೭ರ ಪ್ರದೇಶಗಳ ಮೂಲಕ ಮತ್ತೂರು ಸ.ನಂ.೧೨೭ ರಲ್ಲಿನ ತೋಡಿನಲ್ಲಿ ಅಂತ್ಯಗೊಂಡು ಮುಗಟಗೇರಿ ಗ್ರಾಮದ ಸ.ನಂ.೯ ರಿಂದ ದಕ್ಷಿಣಾಭಿಮುಖವಾಗಿ ಸಾಗುತ್ತಾ ಸ.ನಂ.೨೪, ೫೦, ೫೧ ರ ತೋಡಿನ ಮೂಲಕ ಹಾದು ಮಗುಟಗೇರಿ ಗ್ರಾಮದ ಸ.ನಂ.೬೨, ೬೩, ೫೪, ೫೬, ೫೭/೧ ರ ಮೂಲಕ ಕಾನೂರು ಗ್ರಾಮದ ಗಡಿ ಪ್ರದೇಶವನ್ನು ಒಳಗೊಂಡ ಮತ್ತೂರು ಗ್ರಾಮದ ಸ.ನಂ.೭೯, ೮೦, ೯೯ ರ ಮೂಲಕ ಸಾಗಿ ಮುಗುಟಗೇರಿ ಗ್ರಾಮದ ಸ.ನಂ.೧೦೦ ರಲ್ಲಿ ಅಂತ್ಯಗೊಳ್ಳುತ್ತದೆ.
ದಕ್ಷಿಣ ದಿಕ್ಕಿನ ಗಡಿಯ ಸರಹದ್ದು ಮುಗುಟಗೇರಿ ಗ್ರಾಮದ ಗಡಿಯನ್ನೊಳಗೊಂಡ ಪ್ರದೇಶ ಸ.ನಂ.೧೦೦ ರಿಂದ ಪ್ರಾರಂಭವಾಗಿ ಪಶ್ಚಿಮಾಭಿಮುಖವಾಗಿ ಸಾಗುತ್ತಾ ಸ.ನಂ.೧೦೫/೨ ರಲ್ಲಿನ ತೋಡಿನ ಮೂಲಕ ಹಾಯ್ದು, ಸ.ನಂ.೧೦೬, ೧೦೭ ರಲ್ಲಿನ ತೋಡು ಸ.ನಂ.೧೦೯, ೧೪೪/೧, ೧೪೫ ರಲ್ಲಿನ ಹುದಿಕೇರಿ ಗ್ರಾಮದ ಭಾಗಶಃ ಪ್ರದೇಶವನ್ನು ಒಳಗೊಂಡು ಸ.ನಂ.೧೪೬/೨ ರಲ್ಲಿ ಅಂತ್ಯಗೊಳ್ಳುತ್ತದೆ.
ಪಶ್ಚಿಮ ದಿಕ್ಕಿನ ಗಡಿಯ ಸರಹದ್ದು ಅರುವತ್ತೊಕ್ಕಲು ಗ್ರಾಮದ ವಾಯವ್ಯ ದಿಕ್ಕಿನ ಪ್ರದೇಶದ ಸ.ನಂ.೧೩೯ ರಿಂದ ಪ್ರಾರಂಭಗೊಂಡು ದಕ್ಷಿಣಾಭಿಮುಖವಾಗಿ ಚಲಿಸುತ್ತಾ ಸ.ನಂ.೧೩೧, ೧೩೨/೪, ೧೩೩, ೧೩೪/೪, ೧೩೪/೨, ೧೩೪/೫, ೧೩೪/೧೫ ೧.೨೦.೧೪, ೪೧, ೩೯/೧, ೩೮, ೬೭, ೩೭, ೬೬, ೮೪, ೯೫, ೧೦೦, ೯೯, ೧೩೩ ರ ಪ್ರದೇಶಗಳನ್ನು ಒಳಗೊಂಡು ಅಂತ್ಯಗೊಳ್ಳುತ್ತದೆ. ನಂತರ ಹುದೂರು ಗ್ರಾಮದ ಸ.ನಂ.೮/೩, ೮/೨, ೮/೧, ೨೦/೧, ೨೧/೩ ರ ಪ್ರದೇಶಗಳನ್ನು ಒಳಗೊಂಡು ಸ.ನಂ.೩೦/೩ ರ ತೋಡಿನ ಮೂಲಕ ಹಾಯ್ದು ಸ.ನಂ.೩೦/೧೦, ೩೦/೧, ೩೫, ೩೬/೫೦. ೩೬/೧೩, ೩೬/೧೧ ರ ಮೂಲಕ ಸಾಗಿ ಮುಗುಟಗೇರಿ ಗ್ರಾಮದ ಸ.ನಂ. ೧೫/೧, ೧೨೮ ರ ತೋಡು, ೩೫/೨, ೧೨೯ರಲ್ಲಿನ ರಾಜ್ಯ ಹೆದ್ದಾರಿ ಮಾರ್ಗದ ಪ್ರದೇಶವನ್ನು ಒಳಗೊಂಡು ಸ.ನಂ.೧೩೦/೧, ೧೩೧, ೧೮೭ ರ ತೋಡು ಮತ್ತು ಹುದಿಕೇರಿ ಗ್ರಾಮದ ಗಡಿಗೆ ಹೊಂದಿಕೊಂಡಿರುವ ಸ.ನಂ.೧೪೬/೧, ೧೪೬/೨ ರಲ್ಲಿ ಅಂತ್ಯಗೊಳ್ಳುತ್ತದೆ.
ಉದ್ದೇಶಿತ ಪೊನ್ನಂಪೇಟೆ ಪಟ್ಟಣ ಪಂಚಾಯಿತಿ ೧೧.೩೪ ಚದರ ಕಿಲೋ ಮೀಟರ್ ವ್ಯಾಪಿಸಿದ್ದು, ಇದಕ್ಕೇ ಸೇರ್ಪಡೆಯಾಗುವ ಪ್ರದೇಶಗಳು ಮತ್ತು ನಾಲ್ಕೂ ದಿಕ್ಕುಗಳಲ್ಲಿ ಗಡಿಗಳನ್ನು ಗುರುತಿಸಿ ಮಾ. ೬ರಂದು ರಾಜ್ಯಪತ್ರದಲ್ಲಿ ಅಧಿಸೂಚನೆ ಹೊರಡಿಸಲಾಗಿದೆ. ಈ ಬಗ್ಗೆ ಯಾವುದೇ ಆಕ್ಷೇಪಣೆಗಳು, ಸಲಹೆಗಳನ್ನು ಕೊಡಲು ಇಚ್ಛಿಸುವವರು ಕಾರಣ ಸಹಿತ ಲಿಖಿತವಾಗಿ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರಿಗೆ ಏ.೬ರ ಒಳಗೆ ಕಳುಹಿಸಬಹುದಾಗಿದೆ.
ಗ್ರಾಮ ಪಂಚಾಯಿತಿ ಆಗಿರುವ ಪೊನ್ನಂಪೇಟೆ ಪಟ್ಟಣ ಪಂಚಾಯಿತಿ ಆಗುವ ನಿಟ್ಟಿನಲ್ಲಿ ಪ್ರಕ್ರಿಯೆಗಳು ನಡೆಯುತ್ತಿದೆ. ಊರುಗಳ ಸೇರ್ಪಡೆ ಮತ್ತು ಗಡಿ ನಿಗದಿಪಡಿಸಿ ಸರ್ಕಾರ ಈಗಾಗಲೇ ರಾಜ್ಯ ಪತ್ರ ಪ್ರಕಟಿಸಿದ್ದು, ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ. ಒಂದು ತಿAಗಳ ಒಳಗೆ ಆಕ್ಷೇಪಣೆಗಳು ಕಳಿಸಬೇಕಾಗುತ್ತದೆ. ಆಕ್ಷೇಪಣೆಗಳನ್ನು ಸರಿಪಡಿಸಿದ ನಂತರ ಅಂತಿಮ ಅಧಿಸೂಚನೆ ಹೊರಬೀಳುತ್ತದೆ. ನಂತರ ಜಿಲ್ಲಾಧಿಕಾರಿ ನಿಗದಿಪಡಿಸುವ ದಿನಾಂಕದ ಒಳಗೆ ಸಂಬAಧಿಸಿದವರಿಗೆ ಗ್ರಾಮ ಪಂಚಾಯಿತಿ ಆಸ್ತಿಗಳನ್ನು ಹಸ್ತಾಂತರಿಸಬೇಕಾಗುತ್ತದೆ.
ಪುಟ್ಟರಾಜು, ಪಿಡಿಒ, ಪೊನ್ನಂಪೇಟೆ ಗ್ರಾ.ಪಂ.