ಸ್ತನ್ಯಪಾನ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ ಸುಪೋಶನ್ ಅಧಿಕಾರಿ ಡಾ.ಪ್ರೇಮಾ ಡಿಸೋಜ ಮಾಹಿತಿ

mng--8 Aug Child welfare
Published on

ಮಂಗಳೂರು:ಎದೆ ಹಾಲು ಪೌಷ್ಠಿಕಾಂಶವನ್ನು ಒದಗಿಸುವ ಜತೆಗೆ ವಿವಿಧ ರೋಗಗಳವಿರುದ್ಧ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ಮಗುವಿನ ಭವಿಷ್ಯದ ಆರೋಗ್ಯವನ್ನು ನಿರ್ಧರಿಸುತ್ತದೆ ಎಂದು ಸುಪೋಷನ್ ಅಧಿಕಾರಿ ಡಾ.ಪ್ರೇಮಾ ಡಿಸೋಜ ಹೇಳಿದರು.


ಅದಾನಿ ವಿಲ್ಮಾರ್ ಲಿಮಿಟೆಡ್‌ನ ಸಿ.ಎಸ್.ಆರ್. ಉಪಕ್ರಮಗಳು ಮತ್ತು ಅದಾನಿ ಫೌಂಡೇಶನ್‌ನಿಂದ ಜಾರಿಗೊಳಿಸಲಾದ ಸುಪೋಶನ್ ಯೋಜನೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಮಂಗಳೂರು ನಗರ ಇವುಗಳ ಸಹಯೋಗದಲ್ಲಿ ಪಣಂಬೂರುನಲ್ಲಿ ನಡೆದ ವಿಶ್ವ ಸ್ತನ್ಯಪಾನ ಸಪ್ತಾಹದಲ್ಲಿ ಮಾಹಿತಿ ನೀಡಿದರು.


ತಾಯಿಯ ಹಾಲು ಮಗುವಿನ ನಿದ್ರೆಯ ಮಾದರಿಯ ಮೇಲೆ ಪರಿಣಾಮ ಬೀರಿ ನಿದ್ರಿಸಲು ಪ್ರೇರೇಪಿಸುತ್ತದೆ. ಹಾರ್ಮೋನುಗಳನ್ನು ಹೊಂದಿರುತ್ತದೆ. ಶಿಶು ಸಾವಿನ ಸಿಂಡ್ರೋಮ್ ಕಡಿಮೆ ಮಾಡುತ್ತದೆ. ಸ್ತನ ಕ್ಯಾನ್ಸರ್ ಬರುವ ಸಾಧ್ಯತೆ ಕಡಿಮೆ ಮಾಡುತ್ತದೆ. ಆದ್ದರಿಂದ ಮಗುವಿಗೆ ಸ್ತನ್ಯ ಪಾನ ಅತೀ ಅವಶ್ಯವಾಗಿದೆ ಎಂದರು.


ಶಿಶು ಅಭಿವೃದ್ಧಿ ಯೋಜನೆಯ ಸುರತ್ಕಲ್ ವಲಯದ ಮೇಲ್ವಿಚಾರಕಿ ಅನುಪಮ, ಎದೆ ಹಾಲು, ತಾಯಿಯಂದಿರು ಸೇವಿಸಬೇಕಾದ ಪೌಷ್ಠಿಕ ಆಹಾರದ ಬಗ್ಗೆ ಮಾಹಿತಿ ನೀಡಿದರು. ತಾಯಿ ಪೋಷಕಾಂಶ ಪೂರಿತ ಆಹಾರ ಹೆಚ್ಚು ಸೇವಿಸಿ ನೀರು ಕುಡಿಯಬೇಕು. ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.


ಅಂಗನವಾಡಿ ಕಾರ್ಯಕರ್ತೆಯರಾದ ವೀಣಾ, ಸಂಧ್ಯಾ, ಸೌಮ್ಯ, ದೀಪಿಕಾ, ಅದಾನಿ ಫೌಂಡೇಶನ್‌ನ ಸಹಾಯಕ ಸುಪೋಶನ್ ಅಧಿಕಾರಿಗಳಾದ ಚೈತ್ರಾ ಮತ್ತು ರೋಶನಿ, ಸಂಗಿನಿಯರಾದ ರೇಖಾ, ಮಾಲತಿ, ಸುಷ್ಮಾ ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net