

ಬಾದಾಮಿ: ಕನ್ನಡ ಭಾಷೆ ಕಲಿಕೆಗೆ ಕಠಿಣವಾದ ಭಾಷೆ. ಈ ಭಾಷೆಯಲ್ಲಿ ವಿದ್ಯಾರ್ಥಿಗಳು ಸಾಧನೆಯನ್ನು ಮಾಡಿದ್ದಾರೆ. ನೂರಕ್ಕೆ ನೂರು ಸಾಧನೆ ಮಾಡುವುದು ಬಹಳ ಕಠಿಣವಾದ ಕೆಲಸ. ಆ ಕೆಲಸ ಮಾಡಲು ಗುರುಗಳು ಅವಿರತವಾಗಿ ಮಾರ್ಗದರ್ಶನ ಮಾಡಿದ್ದನ್ನು ಸ್ಮರಿಸಬೇಕಿದೆ ಎಂದು ಉಪನ್ಯಾಸಕ ಎಸ್.ಎಸ್.ಮೂಲಿಮನಿ ಹೇಳಿದರು.
ಸೋಮವಾರ ಇಲ್ಲಿನ ಜಯನಗರ ಬಡಾವಣೆಯಲ್ಲಿರುವ ತಾಲೂಕಾ ಕನ್ನಡ ಸಾಹಿತ್ಯ ಭವನದಲ್ಲಿ ತಾಲೂಕಾ ಕಸಾಪ ವತಿಯಿಂದ ಹಮ್ಮಿಕೊಂಡಿದ್ದ ಎಸ್.ಎಸ್.ಎಲ್.ಸಿ.ಪರೀಕ್ಷೆಯಲ್ಲಿ ಮಾತಭಾಷೆಯಲ್ಲಿ 125 ಕ್ಕೆ 125 ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮತ್ತು ಕನ್ನಡ ಭಾಷಾ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸಾಧನೆಯನ್ನು ಮಾಡಿರತಕ್ಕಂತ ವಿದ್ಯಾರ್ಥಿಗಳ ಹಾಗೂ ಗುರುಗಳ ಗುರುಗಳನ್ನು ಅಭಿನಂದಿಸಿದಕ್ಕಾಗಿ, ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕ ಘಟಕವನ್ನು ಅಭಿನಂದಿಸಿದರು.
ಕಸಾಪ ಪದಾಕಾರಿ ಶಿವಾನಂದ ಪೂಜಾರ ಮಾತನಾಡಿ ಕನ್ನಡ ವಿಷಯವನ್ನು ನಾವು ಎಷ್ಟು ಮಾತನಾಡಿದರು ಅಷ್ಟು ಮಾನಸಿಕ ನೆಮ್ಮದಿ ಮತ್ತು ಸಂತೋಷ ಸಿಗುತ್ತದೆ ಎಂದು ಹೇಳಿದರು ಮಕ್ಕಳ ಸಾಧನೆಯನ್ನು ಕೊಂಡಾಡುತ್ತಾ ಕಸ್ತೂರಿ ಕನ್ನಡದ ಕಂಪನ್ನು ಕನ್ನಡ ಸಾಹಿತ್ಯ ಪರಿಷತ್ತು ತಾಲೂಕ ಘಟಕ ಬಾದಾಮಿ ಹರಡುತ್ತಾ ಇದೆ ಎಂದು ಹೇಳಿದರು. ಉಪನ್ಯಾಸಕ ವಿ.ಬಿ.ಸಣ್ಣಸಕ್ಕರಗೌಡರ ವಿಶೇಷ ಉಪನ್ಯಾಸ ನೀಡಿ ಮಾತನಾಡಿ ಕನ್ನಡವನ್ನು ಮನೆಯಲ್ಲಿ ಎಲ್ಲರೂ ಬಳಸುತ್ತಾ ಮಾತ ಭಾಷಾ ಪ್ರೇಮವನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು. ಮಾತಭಾಷೆವಾದ ನಮ್ಮ ಕನ್ನಡ ಅತ್ಯಂತ ಹಳೆಯ ಭಾಷೆಯಾಗಿದೆ. ಈ ಭಾಷೆಗೆ ದೀರ್ಘಕಾಲದ ಇತಿಹಾಸವಿದೆ ಎಂದು ಹೇಳಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿದ್ದ ನವಗಹ ಹಿರೇಮಠದ ಪೂಜ್ಯ ಶಿವಪೂಜಾ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ ಮಕ್ಕಳ ಪ್ರತಿಭೆ ಇದೇ ರೀತಿ ಬೆಳಗಲಿ ಕನ್ನಡ ಭಾಷೆಯನ್ನು ಉಳಿಸಲಿ ಕನ್ನಡ ಸಾಹಿತ್ಯ ಪರಿಷತ್ತು ಇದೇ ರೀತಿ ಹೆಚ್ಚಿನವನ್ನು ಕೆಲಸವನ್ನು ಮಾಡಲೆಂದು ಈ ಸಂದರ್ಭದಲ್ಲಿ ಹೇಳಿದರು.
ನೂರಕ್ಕೆ ನೂರು ಸಾಧನೆಯನ್ನು ಮಾಡಿದ ಎಲ್ಲ ವಿದ್ಯಾರ್ಥಿಗಳಿಗೆ ಹಾಗೂ ಸಾಧನೆಗೆ ಪ್ರೇರಣೆಯಾದ ಎಲ್ಲಾ ಗುರುಗಳಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಸನ್ಮಾನಿಸಲಾಯಿತು.
ವೇದಿಕೆಯ ಮೇಲೆ ತಾಲೂಕಾ ಕಸಾಪ ಅಧ್ಯಕ್ಷ ಬಿ.ಎ್.ಹೊರಕೇರಿ, ಗೌರವ ಕಾರ್ಯದರ್ಶಿ ಆರ್.ಎಂ.ಸಾರವಾಡ, ವಿ.ಎಸ್.ಶೆಟ್ಟರ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕ ಘಟಕಕ್ಕೆ ಕುಮಾರ್ ಪವಾಡಶೆಟ್ಟಿ ಹಾಗೂ ಶಿವಾನಂದ ಪೂಜಾರ ಇವರನ್ನು ಪುಷ್ಪ ಕೊಡುವುದರ ಮೂಲಕ ಸ್ವಾಗತಿಸಲಾಯಿತು.
ಕಾರ್ಯಕ್ರಮದಲ್ಲಿ ಪಿ.ಎನ್.ಚಳಗೇರಿ, ಡಿ.ಬಿ. ಹಡಗಲಿ, ಅನಸೂಯ ಎಲೆಗಾರ, ಪಿ.ಟಿ.ನಿಲಗುಂದ, ಬಿ.ಎಸ್.ಅಬ್ಬಿಗೇರಿ, ಗಂಗಾಧರ ತಳವಾರ, ಶಿವಾನಂದ ಪೂಜಾರ ಮೊದಲಾದವರು ಉಪಸ್ಥಿತರಿದ್ದರು. ತಾಲೂಕಾ ಕಸಾಪ ಅಧ್ಯಕ್ಷ ಬಿ.ಎ್.ಹೊರಕೇರಿ ಸ್ವಾಗತಿಸಿದರು. ಶಂಕ್ರಮ್ಮ ಕುಬಸದ ನಿರೂಪಿಸಿದರು. ಕುಮಾರ ಪವಾಡಶೆಟ್ಟಿ ವಂದಿಸಿದರು.