ವಸತಿ ಸೌಲಭ್ಯ ಕಲ್ಪಿಸಲು ತ್ವರಿತ ಕ್ರಮ

27 SANDOOR 2
ಸಂಡೂರು ತಾಲೂಕು ಬಂಡ್ರಿ ಗ್ರಾಮದಲ್ಲಿ ವಿಮುಕ್ತ ದೇವದಾಸಿಯರಿಗೆ ಪುನರ್ವಸತಿ ಕಲ್ಪಿಸಲು ನಿಗದಿಯಾದ ಸ್ಥಳಕ್ಕೆ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಎಂಡಿ ರಮೇಶ್ ಬಾಬು ಭೇಟಿ ನೀಡಿ ಪರಿಶೀಲಿಸಿದರು. ಸಂಘದ ಜಿಲ್ಲಾ ಕಾರ್ಯದರ್ಶಿ ಎ.ಸ್ವಾಮಿ, ತಾಲೂಕು ಕಾರ್ಯದರ್ಶಿ ಎಚ್.ದುರುಗಮ್ಮ ಕೊಂಡಾಪುರ, ಅಧ್ಯಕ್ಷೆ ಮಾರೆಮ್ಮ ಇತರರಿದ್ದರು.
Published on

ಸಂಡೂರು: ಬಂಡ್ರಿ ಗ್ರಾಮದಲ್ಲಿ ವಿಮುಕ್ತ ದೇವದಾಸಿಯರ ಪುನರ್ವಸತಿಗಾಗಿ ಕಾಯ್ದಿರಿಸಿದ ಸ್ಥಳಕ್ಕೆ ಕರ್ನಾಟಕ ಮಹಿಳಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ರಮೇಶ್‌ಬಾಬು ಶನಿವಾರ ಭೇಟಿ ನೀಡಿ ಪರಿಶೀಲಿಸಿದರು.

ಸರ್ವೇ ನಂ.378ರ ಆರು ಎಕರೆ ಜಮೀನಲ್ಲಿ ನಿವೇಶನ ನೀಡಬೇಕೆಂದು 2020ರಲ್ಲಿ ಮಹಿಳಾ ಮತ್ತು ಮಕ್ಕಳ ಅಬಿವೃದ್ಧಿ ಇಲಾಖೆ ಉಪನಿರ್ದೇಶಕ ಸಲ್ಲಿಸಿದ್ದ ಮನವಿ ಪುರಸ್ಕರಿಸಿ ದೇವದಾಸಿ ಪುನರ್ವಸತಿ ಯೋಜನೆಗಾಗಿ ಕಾಯ್ದಿರಿಸಲಾಗಿದೆ. ವಸತಿ ಸೌಲಭ್ಯ ಕಲ್ಪಿಸಲು ತ್ವರಿತ ಕ್ರಮ ಕೈಗೊಳ್ಳಬೇಕೆಂದು ತಹಸೀಲ್ದಾರ್‌ಗೆ ಸೂಚಿಸಲಾಗುವುದು ಎಂದರು.

ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ಜಿಲ್ಲಾ ಕಾರ್ಯದರ್ಶಿ ಎ.ಸ್ವಾಮಿ ಮಾತನಾಡಿ, ತಾಲೂಕಿನ ಅರ್ಹ ಫಲಾನುಭವಿಗಳ ಕುಟುಂಬಗಳಿಗೆ 12ಲಕ್ಷರೂ. ವೆಚ್ಚದಲ್ಲಿ ವಸತಿ ಸೌಲಭ್ಯ ಕಲ್ಪಿಸಬೇಕು. ಮಹಿಳೆಯರ ಗುಂಪುಗಳಿಗೆ ಸ್ವಯಂ ಉದ್ಯೋಗಕ್ಕಾಗಿ 10ರಿಂದ 20 ಲಕ್ಷ ರೂ. ಬಡ್ಡಿ ರಹಿತ ಸಾಲ ನೀಡಬೇಕು. ತಾಲೂಕಿನ ವಿವಿಧೆಡೆ ವಿಮುಕ್ತ ದೇವದಾಸಿಯರಿಗೆ ವಿವೇಶನ ಹಂಚುವುದಕ್ಕೆ ಕ್ರಮ ಕೈಗೊಳ್ಳಬೇಕು ಎಂದರು.

ಸಿಡಿಪಿಒ ನಾಗರಾಜ, ಸಂಘದ ತಾಲೂಕು ಕಾರ್ಯದರ್ಶಿ ಎಚ್.ದುರುಗಮ್ಮ ಕೊಂಡಾಪುರ, ಅಧ್ಯಕ್ಷೆ ಮಾರೆಮ್ಮ, ಒಬಮ್ಮ, ಬಸಮ್ಮ, ಚನ್ನಮ್ಮ, ಹನುಮಕ್ಕ, ಚಿನ್ನಾಪುರಮ್ಮ, ತಿಮ್ಮಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net