ಅಪಘಾತ ನಿಯಂತ್ರಣಕ್ಕಾಗಿ ಚಾಲಕರಿಗೆ ಆರೋಗ್ಯ ಶಿಬಿರ

17HRBD-1Web
ಹಿರೇಬಾಗೇವಾಡಿ ಟೋಲ್ ನಾಕಾದಲ್ಲಿ ವಾಹನ ಚಾಲಕರಿಗಾಗಿ ಆರೋಗ್ಯ ಮತ್ತು ಕಣ್ಣು ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಸುಂದರ ಮ್ಯಾಗೇರಿ, ಜಗದೀಶ ನಾಡ, ಡಾ.ಬಿ.ಎನ್.ತುಕ್ಕಾರ ಮತ್ತಿತರ ಅಧಿಕಾರಿಗಳು ಇದ್ದರು.
Published on

ಹಿರೇಬಾಗೇವಾಡಿ: ಆರೋಗ್ಯ ಇಲಾಖೆ ಮತ್ತು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇವರ ಆಶ್ರಯದಲ್ಲಿ ಇಲ್ಲಿಯ ಟೋಲ್ ನಾಕಾದಲ್ಲಿ ವಾಹನ ಚಾಲಕರಿಗೆ ಬುಧವಾರ ಮತ್ತು ಗುರುವಾರ ಆರೋಗ್ಯ ತಪಾಸಣೆ ಮತ್ತು ಕಣ್ಣು ತಪಾಸಣೆಯ ಉಚಿತ ಶಿಬಿರ ಆಯೋಜಿಸಲಾಗಿತ್ತು.

ಹೆದ್ದಾರಿಯಲ್ಲಿ ಓಡಾಡುವ ವಾಹನಗಳ ಚಾಲಕರಿಗೆ ವೇಳೆಗೆ ಸರಿಯಾಗಿ ಆರೋಗ್ಯದ ಕಡೆ ಗಮನ ಹರಿಸಲಾಗದ್ದರಿಂದ ಚಾಲಕರ ಆರೋಗ್ಯ ಸಮಸ್ಯೆಯಾಗಿ ಅಪಘಾತಗಳು ಸಂಭವಿಸುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಹೀಗಾಗಿ ಮಾರ್ಗ ಮಧ್ಯೆಯೇ ಅವರ ಆರೋಗ್ಯ ಮತ್ತು ತಪಾಸಣೆ ನಡೆಸಿ ಅವಶ್ಯಕತೆ ಇದ್ದವರಿಗೆ ಕನ್ನಡಕ ಮತ್ತು ಕೋವಿಡ್-19 ನಿಯಂತ್ರಣ ಮುಂಜಾಗ್ರತಾ ಕ್ರಮವಾಗಿ ಮಾಸ್ಕ್ ವಿತರಿಸಲಾಯಿತು. ಸುಂದರ ಮ್ಯಾಗೇರಿ, ಜಗದೀಶ ನಾಡ, ಡಾ.ಚಾಂದನಿ ದೇವಡಿ, ಡಾ. ಬಿ.ಎನ್.ತುಕ್ಕಾರ, ಡಾ.ಸಂಜಯ ಡುಮ್ಮಗೋಳ, ಡಾ. ಎನ್. ಸಂಸುದ್ದಿ, ಸುವಂಗಲಾ, ಪ್ರಭಾಕರ ಲಿಂಗದಾಳ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net