ಆಕಸ್ಮಿಕ ಬೆಂಕಿ - ವ್ಯಾನ್ ಬೆಂಕಿಗೆ ಆಹುತಿ

Published on

ಮೈಸೂರು: ಪೇಪರ್ ಪ್ಲೇಟ್‌ಗಳು ತುಂಬಿಕೊಂಡು ಹೋಗುತ್ತಿದ್ದ ಒಮ್ನಿ ವ್ಯಾನಿನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಸಂಪೂರ್ಣ ಸುಟ್ಟು ಹೋಗಿದೆ.

ನಗರದ ಅತ್ಯಂತ ಜನನಿಬಿಡ ಸಯ್ಯಜಿರಾವ್ ರಸ್ತೆಯ ದೇವರಾಜ ಮಾರುಕಟ್ಟೆ ಎದುರು ಮಂಗಳವಾರ ಮಧ್ಯಾಹ್ನ ಬೆಂಕಿ ಅವಘಡ ಉಂಟಾಗಿದ್ದು, ಇದರಿಂದ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಪಡುವಾರಹಳ್ಳಿಯ ಲಕ್ಷ್ಮಣ್ ಅವರು ಪೇಪರ್ ಪ್ಲೇಟ್‌ಗಳು ತುಂಬಿಕೊಂಡು ವ್ಯಾನಿನಲ್ಲಿ ತೆರಳುತ್ತಿದ್ದು, ಈ ವೇಳೆಯೇ ಶಾರ್ಟ್ ಸರ್ಕೀಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಲಕ್ಷ್ಮಣ್ ಅವರು ಕಾರಿನಿಂದ ಇಳಿದು ಹೊರ ಬಂದಿದ್ದಾರೆ. ತಕ್ಷಣ ಕಾರಿನಲ್ಲಿ ಬೆಂಕಿಯ ಜ್ವಾಲೆ ಎಲ್ಲೆಡೆ ಆವರಿಸಿ ಸಂಪೂರ್ಣ ವ್ಯಾನ್ ಬೆಂಕಿಗಾಹುತಿಯಾಗಿದೆ. ಇದರಿಂದ ಕೆಲಕಾಲ ಸಂಚಾರದ ಅಸ್ತವ್ಯಸ್ತತೆ ಉಂಟಾಗಿತ್ತು. ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿನಂದಿಸಿದರು. ಈ ಸಂಬಂಧ ದೇವರಾಜ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net