ಗೋದಾಮಿಗೆ ಆಕಸ್ಮಿಕ ಬೆಂಕಿ

bbgd benki
ಬಸವನ ಬಾಗೇವಾಡಿ ಪಟ್ಟಣದ ಎಪಿಎಂಸಿಯಲ್ಲಿನ ಗೋದಾಮಿಗೆ ಹೊತ್ತಿಕೊಂಡ ಬೆಂಕಿ ನಂದಿಸುತ್ತಿರುವ ಅಗ್ನಿ ಶಾಮಕ ಸಿಬ್ಬಂದಿ. ತಹಸೀಲ್ದಾರ್ ಯಮನಪ್ಪ ಸೋಮನಕಟಿ ಮತ್ತಿತರರಿದ್ದರು.
Published on

ಬಸವನಬಾಗೇವಾಡಿ: ಪಟ್ಟಣದ ವಿಜಯಪುರ ರಸ್ತೆಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿನ ಗೋದಾಮಿಗೆ ಬೆಂಕಿ ತಗುಲಿ ಅಪಾರ ಮೌಲ್ಯದ ದವಸ, ಧಾನ್ಯ ಭಸ್ಮಗೊಂಡಿದೆ.

ಗುರುವಾರ ಬೆಳಗ್ಗೆ ವಾಯವಿಹಾರಕ್ಕೆ ತೆರಳಿದ್ದ ಜನರು ಗೋದಾಮಿಗೆ ಬೆಂಕಿ ತಗುಲಿದ್ದನ್ನು ಗಮನಿಸಿ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಅಗ್ನಿಶಾಮಕದಳ ಸಿಬ್ಬಂದಿ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ.

ತಾಲೂಕಿನ ಇಂಗಳೇಶ್ವರದ ಪ್ರಭು ಡಿಗ್ಗಾವಿ ಅವರಿಗೆ ಈ ಗೋದಾಮು ಸೇರಿದೆ. ಗೋದಾಮಿನಲ್ಲಿದ್ದ 250 ಚೀಲ ತೊಗರಿ, 150 ಚೀಲ ಮೆಕ್ಕೆಜೋಳ, 50 ಚೀಲ ಕಡಲೆ, 50 ಚೀಲ ಸಜ್ಜೆ ಸೇರಿ ದವಸ ಧಾನ್ಯ, ಖಾಲಿ ಚೀಲಗಳು, ತಾಡಪಲ್‌ಗಳು ಸುಟ್ಟು ಲಕ್ಷಾಂತರ ರೂ. ನಷ್ಟವಾಗಿದೆ.

ಸ್ಥಳಕ್ಕೆ ತಹಸೀಲ್ದಾರ್ ಯಮನಪ್ಪ ಸೋಮನಕಟ್ಟಿ ಭೇಟಿ ನೀಡಿ ಪರಿಶೀಲಿಸಿದರು. ಬಸವನಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕಾಶ ಡಿಗ್ಗಾವಿ ದೂರು ದಾಖಲಿಸಿದ್ದಾರೆ.

ಅಗ್ನಿ ನಂದಿಸುವ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಠಾಣಾಧಿಕಾರಿ ಭೀಮಾಶಂಕರ ಮಾದರ, ಪಿ.ಟಿ. ಜಾಲಗೇರಿ, ನಾರಾಯಣ ರಾಠೋಡ, ಸುಭಾಸ ಹಾದಿಮನಿ, ಮಹಮ್ಮದ ತಾಂಬೋಳಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net