ಫ್ಯಾಕ್ಟರಿಯೊಂದಕ್ಕೆ ಆಕಸ್ಮಿಕ ಬೆಂಕಿ, 8 ಜನ ಗಾಯಾಳು ಕಿಮ್ಸ್ ಗೆ ದಾಖಲು

FIRE
Published on

ಹುಬ್ಬಳ್ಳಿ: ನಗರದ ಹೊರವಲಯದ ತಾರಿಹಾಳ ಕೈಗಾರಿಕಾ ವಸಾಹತು ಪ್ರದೇಶದಲ್ಲಿನ ಫ್ಯಾಕ್ಟರಿಯೊಂದಕ್ಕೆ ಆಕಸ್ಮಿಕ ಬೆಂಕಿ ತಗುಲಿ, ಹತ್ತಕ್ಕೂ ಹೆಚ್ಚು ಕಾರ್ಮಿಕರು ಗಂಭೀರ ಗಾಯಗೊಂಡಿದ್ದಾರೆ.
ಗಾಯಗೊಂಡ ಕಾರ್ಮಿಕರನ್ನು ಕಿಮ್ಸ್'ಗೆ ದಾಖಲಿಸಲಾಗಿದೆ. ಫ್ಯಾಕ್ಟರಿಯಲ್ಲಿ ಮತ್ತಷ್ಟು ಕಾರ್ಮಿಕರು ಸಿಲುಕಿಕೊಂಡಿರುವ ಶಂಕೆಯಿದ್ದು, ಅಗ್ನಿಶಾಮಕ ದಳ ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ.
8 ಜನ ಗಾಯಾಳು ಕಿಮ್ಸ್ ಗೆ ದಾಖಲು: 6 ಮಹಿಳೆಯರು 2 ಪುರುಷರು ಕಿಮ್ಸ್ ಗೆ ದಾಖಲು
ಕಿಮ್ಸ್ ನಲ್ಲಿ ಮುಂದುವರೆದ ಚಿಕಿತ್ಸೆ ಚನ್ನವ್ವ  42, ಪ್ರೇಮಾ 20, ಮಾಳೇಶ 27, ನನ್ನಿಮಾ 35, ವಿಜಯಲಕ್ಷ್ಮಿ 34, ಮಲ್ಲಿಕ್ ರೆಹಾನ್ 18, ನಿರ್ಮಲಾ 29, ಗೌರವ್ವ 45, ಗಾಯಗೊಂಡಿದ್ದಾರೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸ್ ಆಯುಕ್ತ ಲಾಭೂರಾಮ್. ಬಳಿಕ ಮಾಹಿತಿ ನೀಡಿದ ಅವರು, ಸಂಜೆ ೫ ಗಂಟೆಗೆ ಘಟನೆ ಸಂಭವಿಸಿತ್ತು. ಇದೀಗ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದು ತಿಳಿಸಿದರು. ಅಗ್ನಿಶಾಮಕ ದಳ‌ ಬೆಂಕಿ ಹತೋಟಿಗೆ ತಂದಿಗೆ. ಫ್ಯಾಕ್ಟರಿ ಮಾಲೀಕರ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ಪೊಲೀಸ್ ಆಯá-ಕ್ತ ಲಾಭೂರಾಮ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net