ಆಕಸ್ಮಿಕ ಬೆಂಕಿ ತಗುಲಿ ಕಾಫಿ, ಅಡಕೆ ಗಿಡಗಳಿಗೆ ಹಾನಿ

5sri-3
ಶೃಂಗೇರಿಯ ಕಾಮಲೆ ಗುಡ್ಡದ ಶಾಂತಮ್ಮ ಅವರ ಮನೆ ಸಮೀಪ ಬೆಂಕಿ ಆಕಸ್ಮಿಕ ಉಂಟಾಗಿ ಹಾನಿ ಸಂಭವಿಸಿರುವುದು.
Published on

ಶೃಂಗೇರಿ: ಮಸಿಗೆ ಗ್ರಾಮದ ಕಾಮಲೆ ಗುಡ್ಡದ ಶಾಂತಮ್ಮ ಎಂಬುವವರ ಮನೆ ಸಮೀಪ ಶುಕ್ರವಾರ ಆಕಸ್ಮಿಕ ಬೆಂಕಿ ತಗುಲಿ ಸಿಂಟೆಕ್ಸ್ ಮತ್ತು ಕಾಫಿಗಿಡ ಸುಟ್ಟು ಹೋಗಿದೆ. ಮಧ್ಯಾಹ್ನದ ವೇಳಗೆ ಬೆಂಕಿ ಕಾಣಿಸಿಕೊಂಡಿದ್ದು, ಸಮೀಪದ ಮನೆಯವರು ಗ್ರಾಮಸ್ಥರಿಗೆ ತಿಳಿಸಿದ್ದಾರೆ. ಸುತ್ತ ಮುತ್ತಲಿನ ಗ್ರಾಮಸ್ಥರು ಸೇರಿಕೊಂಡು ಬೆಂಕಿ ನಂದಿಸಿದ್ದಾರೆ. ಸಿಂಟೆಕ್ಸ್, ಕುಡಿಯುವ ನೀರಿನ ಪೈಪ್ಗಳು ಸುಟ್ಟು ಕರಕಲಾಗಿದೆ. ಕಾಫಿ, ಅಡಕೆ ಗಿಡಗಳಿಗೆ ಹಾನಿಯಾಗಿದೆ. ಬೆಂಕಿ ನಂದಿಸುವಲ್ಲಿ ಗ್ರಾಮಸ್ಥರಾದ ವಿಜಯ, ಸೀನ, ಪ್ರೇಮಕುಮಾರ್, ಭೋಜ, ಕೃಷ್ಣ, ಶಂಕರ ಮತ್ತಿತರರು ಶ್ರಮಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net