ಅಪಾಯಕಾರಿ ಅರಬೈಲ್ ಘಟ್ಟದಲ್ಲಿ ಸಾವಿನ ಆಟ

bus accident
Published on

ಯಲ್ಲಾಪುರ: ಖಾಸಗಿ ಬಸ್ ಒಂದು ರಸ್ತೆ ಬದಿಯ ದಿಬ್ಬಕ್ಕೆ ಡಿಕ್ಕಿ ಹೊಡೆದು ಚಾಲಕ ಸ್ಥಳದಲ್ಲೇ ಮೃತಪಟ್ಟು, 15 ಪ್ರಯಾಣಿಕರು ಗಾಯಗೊಂಡ ಘಟನೆ ಬುಧವಾರ ತಾಲೂಕಿನ ಅರಬೈಲ್ ಘಟ್ಟದಲ್ಲಿ ರಾಷ್ಟ್ರೀಯ ಹೆದ್ದಾರಿ 63ರ ಮೇಲೆ ನಡೆದಿದೆ.
ಬಸ್ ಚಾಲಕ ಆಂಧ್ರಪ್ರದೇಶದ ನೆಲ್ಲೋರಿನ ಬಟ್ಟಿನಾ ಸುನೀಲ ನಾಗರಾಜು (33) ಮೃತ ವ್ಯಕ್ತಿ. ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಹೈದರಾಬಾದಿನ ನೀತುಶ್ರಿ ಬೋಂಗಾ, ಅಸ್ಮಿತಾ ಪಲ್ಲೇಲಾ, ತೇಜಶ್ರೀ ಪೆದ್ದಿ, ಸಿರಿ ಬೆಲ್ಷುಲಾ, ಸಾಯಿ ಚರಣ್ಯಾ, ಕೃತ್ತಿಕಾ ಗುಡೇಮಾಲ, ಮಂಜುಳಾ ಸರಂಗಮ, ಮೋಹನ ಕೃಷ್ಣ ಅನಂತುಲಾ, ಮಣಿ ಸಾಯಿ ಯಾದಾ, ರೋಶನಿ ತುಲ್ಮಿಟ್ಟಲ, ಮಂಜುನಾಥ, ಬೊಜ್ಜಾ ಶಿವಕುಮಾರ, ನಿಂಗಪ್ಪ ಬಸಪ್ಪ ಮೇಟ್ರೆ ಹಾಗೂ ಬೆಂಗಳೂರು ಕೋರಮಂಗಲದ ಎಂ.ಕಪೀಲ ವಿಶ್ವಜಿತ ಗಾಯಗೊಂಡಿದ್ದಾರೆ.
ಖಾಸಗಿ ಬಸ್‌ನಲ್ಲಿ 35 ಪ್ರಯಾಣಿಕರಿದ್ದು, ಆಂಧ್ರದಿಂದ ಗೋಕರ್ಣಕ್ಕೆ ಪ್ರವಾಸಕ್ಕೆಂದು ಹೊರಟಿದ್ದರು. ಅರಬೈಲ್ ಘಟ್ಟದಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಬಸ್ ರಸ್ತೆ ಪಕ್ಕದ ದಿಬ್ಬಕ್ಕೆ ಡಿಕ್ಕಿ ಹೊಡೆದಿದೆ. ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದು, ಗಾಯಾಳುಗಳಿಗೆ ಯಲ್ಲಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಧಾರವಾಡದ ಎಸ್‌ಡಿಎಂ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಘಟನೆಯಲ್ಲಿ ಬಸ್ ಜಖಂಗೊಂಡಿದೆ. ಈ ಕುರಿತು ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net