ಅಪಘಾತದಿಂದಾದ ಗಾಯದ ನೋವು ತಾಳಲಾರದೇ ಕನಕಪುರ ಮೂಲದ ಯುವಕ ಆತ್ಮಹತ್ಯೆ

NAVEEN
Published on

ಬೆಂಗಳೂರು: ಅಪಘಾತದಿಂದಾದ ಗಾಯಗೊಂಡಿದ್ದ ಯುವಕನೊಬ್ಬ ನೋವು ತಾಳಲಾರದೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಬೆಂಗಳೂರಿನ ಸುಬ್ರಮಣ್ಯಪುರ ಠಾಣಾ ವ್ಯಾಪ್ತಿಯ ಗೌಡನಪಾಳ್ಯದ ನಿವಾಸಿ ನವೀನ್ (23) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಯುವಕ. ಸೋಮವಾರ ಬೆಳಗ್ಗೆ ರೂಂನಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮೂಲತಃ ರಾಮನಗರದ ಕನಕಪುರ ತಾಲೂಕು ಬೆಟ್ಟದಹಲಸೂರು ಗ್ರಾಮದವನಾಗಿದ್ದ ನವೀನ್​, ಬೆಂಗಳೂರಿನ ಉತ್ತರಹಳ್ಳಿ ಮುಖ್ಯರಸ್ತೆಯಲ್ಲಿನ ಮಂಜುನಾಥ್ ಫರ್ನಿಚರ್​ನಲ್ಲಿ ಕೆಲಸ ಮಾಡುತ್ತಿದ್ದ.

ಇತ್ತೀಚೆಗೆ ನಡೆದ ಅಪಘಾತದಲ್ಲಿ ಕಾಲಿಗೆ ಗಂಭೀರವಾದ ಗಾಯವಾಗಿತ್ತು. ಇದರಿಂದ ಕೆಲ ದಿನಗಳಿಂದ ಎಲ್ಲೂ ಹೋಗದೆ ಮನೆಯಲ್ಲಿಯೇ ಇರಬೇಕಿತ್ತು. ಇದರಿಂದ ಗಾಯದ ನೋವು ತಾಳಲಾರದೇ ನವೀನ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಸಂಬಂಧ ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net