ವಿದ್ಯುತ್ ಪ್ರವಹಿಸಿ ರೈತ ದಂಪತಿ ಸಾವು

crime-logo
Published on

ಮಾಯಕೊಂಡ: ದಾವಣಗೆರೆ ತಾಲೂಕಿನ ಆನಗೋಡು ಹೋಬಳಿಯ ಕಾಟಿಹಳ್ಳಿ ಗ್ರಾಮದ ಜಮೀನಿನಲ್ಲಿದ್ದ ವಿದ್ಯುತ್ ಲೈನ್ ಪ್ರವಹಿಸಿ ರೈತ ದಂಪತಿ ಗುರುವಾರ ಮಧ್ಯಾಹ್ನ ಮೃತಪಟ್ಟಿದ್ದಾರೆ.

ಗ್ರಾಮದ ನಾಗರಾಜಪ್ಪ (37), ಲತಾ (28) ಮೃತರು. ಅವರಿಗೆ ಇಬ್ಬರು ಮಕ್ಕಳಿದ್ದಾರೆ.

ರೈತ ದಂಪತಿ ಜಮೀನಿನಲ್ಲಿ ಟೊಮ್ಯಾಟೋ ಬೆಳೆದಿದ್ದರು. ಗುರುವಾರ ಹಣ್ಣುಗಳನ್ನು ಬಿಡಿಸಿ ಬಾಕ್ಸ್‌ಗಳಲ್ಲಿ ತುಂಬಿಸಿ, ಆಟೋಗೆ ಹಾಕಿದ್ದಾರೆ. ಕಳೆದೆರಡು ದಿನಗಳಿಂದ ಸುರಿದ ಮಳೆಗೆ ನೆಲದಲ್ಲಿ ತೇವಾಂಶ ಇದ್ದ ಕಾರಣ ಆಟೋ ಮುಂದಕ್ಕೆ ಚಲಿಸಿಲ್ಲ. ತಕ್ಷಣ ಇಬ್ಬರೂ ಅದನ್ನು ತಳ್ಳಲು ಹೋಗಿದ್ದಾರೆ. ಅಷ್ಟರಲ್ಲೇ ವಿದ್ಯುತ್ ಲೈನ್ ಆಟೋಗೆ ತಗಲಿದೆ. ಆಟೋ ಮುಟ್ಟಿದ ತಕ್ಷಣ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಸ್ಥಳಕ್ಕೆ ದಾವಣಗೆರೆ ಗ್ರಾಮಾಂತರ ಠಾಣೆಯ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net