ಅಪಘಾತದಲ್ಲಿ ಬೈಕ್ ಸವಾರ ಸಾವು

accident-15
Published on

ಎಂ.ಕೆ.ಹುಬ್ಬಳ್ಳಿ:ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ಸಂಭವಿಸಿದ ಲಾರಿ ಮತ್ತು ಬೈಕ್ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮತಪಟ್ಟಿದ್ದಾನೆ.

ಚಿಕ್ಕಬಾಗೇವಾಡಿ ಗ್ರಾಮದ ಸುರೇಶ ಕಡಕೋಳ(22) ಮತ ಬೈಕ್ ಸವಾರ. ಬೆಳಗಾವಿ ಕಡೆಯಿಂದ ಧಾರವಾಡ ಕಡೆ ಸಾಗುವ ಹೆದ್ದಾರಿ ಬಳಿ ನಿಂತಿದ್ದ ಲಾರಿಗೆ ಹಿಂದಿನಿಂದ ಬೈಕ್ ಡಿಕ್ಕಿ ಹೊಡೆದು ದುರ್ಘಟನೆ ನಡೆದಿದೆ. ಹಿಂಬದಿ ಸವಾರ ಅಭಿಷೇಕ ಹೊಸಟ್ಟಿ, ಶಿವರಾಜ ಮಟ್ಲಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಸಿಪಿಐ ಶಿವಾನಂದ ಗುಡಗನಟ್ಟಿ, ಪಿಎಸ್‌ಐ ಪ್ರವೀಣ ಗಂಗೋಳ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net