ಪಾದಾಚಾರಿಗಳ ಮೇಲೆ ಹರಿದ ಕಾರು

Screenshot_20230726_150300_WhatsApp.jpg
Published on

ರಾಯಚೂರು: ಚಾಲಕನ ಅತಿವೇಗ ನಿರ್ಲಕ್ಷತನದಿಂದ ನಗರದ ಸ್ಟೇಷನ್ ರಸ್ತೆಯಲ್ಲಿನ ರಾಮ ಮಂದಿರ ಹತ್ತಿರ ಕಾರು ಪಾದಾಚಾರಿಗಳ ಮೇಲೆ ಹರಿದಿದ್ದರಿಂದ ನಾಲ್ವರು ವಿದ್ಯಾರ್ಥಿಯರು ಗಾಯಗೊಂಡ ಘಟನೆ ಜರುಗಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.

ಡಿವೈಡರ್ ದಾಟುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದ ಕಾರು ನಂತರ ಕಾಲೇಜು ಮುಗಿಸಿಕೊಂಡು ರಸ್ತೆ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದ ವಿದ್ಯಾರ್ಥಿನಿಯರಿಗೆ ಡಿಕ್ಕಿ ಹೊಡೆದಿದೆ. ಘಟನೆ ಜು.18ರಂದು ನಡೆದಿದ್ದು, ವಿಡಿಯೋ ಸಾಮಾಜಿಕ ಜಾಲದಲ್ಲಿ ವೈರಲ್ ಆದ ನಂತರ ಘಟನೆ ಬೆಳಕಿಗೆ ಬಂದಿದೆ.

ವಿದ್ಯಾರ್ಥಿನಿಯರಾದ ಶುಭಮಂಗಳ, ಜ್ಯೋತಿ ತೀವ್ರವಾಗಿ ಗಾಯಗೊಂಡಿದ್ದು, ದ್ವಿಚಕ್ರ ವಾಹನ ಸವಾರ ಶಿವರಾಜ ಪಾಟೀಲ್ ಕೂಡಾ ಗಾಯಗೊಂಡಿದ್ದಾನೆ. ಘಟನೆ ನಂತರ ಕಾರ್ ಚಾಲಕ ಜಾರ್ ಅಹ್ಮದ್ ಕಾರು ಬಿಟ್ಟು ಪರಾರಿಯಾಗಿದ್ದು, ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net