ಅಪಘಾತ ಪಾಣೆಮಂಗಳೂರಿನ ಯುವಕನಿಗೆ ಗಾಯ : ಕಾರಿನಲ್ಲಿ ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದ ಅರುಣ್ ಪುತ್ತಿಲ

IMG-20230917-WA0017
Published on

ಪುತ್ತೂರು: ನಾಯಿ ಅಡ್ಡ ಬಂದು ಬೈಕ್ ಸವಾರನೋರ್ವ ಗಾಯಗೊಂಡ ಘಟನೆ ಪುತ್ತೂರು ಬೈಪಾಸ್ ನಲ್ಲಿ ಸೆ.17 ರಂದು ನಡೆದಿದೆ.

ಪಾಣೆಮಂಗಳೂರಿನ ಮಹೇಂದ್ರ ಎನ್ನುವವರು ತುರ್ತು ಕಾರ್ಯದ ನಿಮಿತ್ತ ಪುತ್ತೂರಿಗೆ ಆಗಮಿಸಿದ್ದು, ಬೈಪಾಸ್ ನಲ್ಲಿ ನಾಯಿ ಅಡ್ಡ ಬಂದು ಅವರ ಬೈಕ್ ಅಪಘಾತವಾಗಿದೆ. ಅಪಘಾತ ನಡೆದಾಗ ಅದೇ ರಸ್ತೆಯಲ್ಲಿ ಹಿಂದೂ ಮುಖಂಡ ಅರುಣ್ ಪುತ್ತಿಲ ಆಗಮಿಸಿದ್ದು, ತಕ್ಷಣ ಗಾಯಾಳು ಅದೇ ರಸ್ತೆಯಲ್ಲಿ ಸಾಗುತಿದ್ದ ಅರುಣ್ ಪುತ್ತಿಲ ಗಾಯಾಳುವನ್ನು ತನ್ನದೇ ಕಾರಿನಲ್ಲಿ ಮಹಾವೀರ ಆಸ್ಪತ್ರೆಗೆ ಕರೆತಂದು ದಾಖಲಿಸಿ ಆರೋಗ್ಯ ವಿಚಾರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net