ಅಪಘಾತದಲ್ಲಿ ಹೋಂಗಾರ್ಡ್ ದಾರುಣ ಸಾವು: ಡಿಕ್ಕಿಯ ರಭಸಕ್ಕೆ ಛಿದ್ರಗೊಂಡ ದೇಹ

3
Published on

ಮಂಡ್ಯ: ತಾಲೂಕಿನ ಮಂಡ್ಯ-ಹೊಳಲು ರಸ್ತೆಯ ಹೊಸಹಳ್ಳಿ ಗೇಟ್ ಬಳಿ ಬುಧವಾರ ರಾತ್ರಿ ಟ್ರ್ಯಾಕ್ಟರ್ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ತಾಲೂಕಿನ ಶಿವಳ್ಳಿ ಗ್ರಾಮದ ಬಸವರಾಜು (45) ಮೃತರು. ಇವರು ಹೋಂಗಾರ್ಡ್ ಆಗಿ ಕೆಲಸ ನಿರ್ವಹಿಸುತ್ತಿದ್ದು, ಬುಧವಾರ ಕರ್ತವ್ಯ ಮುಗಿಸಿಕೊಂಡು ವಾಪಸ್ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ವೇಳೆ ಹೊಳಲು ಕಡೆಯಿಂದ ಮೈಷುಗರ್‌ಗೆ ಕಬ್ಬು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಡಿಕ್ಕಿ ಹೊಡೆದು ಆತನ ಮೇಲೆ ಹರಿದಿದ್ದು, ಸ್ವಲ್ಪ ದೂರ ದೇಹವನ್ನು ಎಳೆದೊಯ್ದಿದೆ. ಪರಿಣಾಮ ದೇಹ ಛಿದ್ರಗೊಂಡಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಂಡ್ಯ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net