ಲಾರಿ ಡಿಕ್ಕಿಯಾಗಿ ದ್ವಿಚಕ್ರ ವಾಹನ ಸವಾರ ಸಾವು

Crime
Published on

ಮಂಡ್ಯ: ಶ್ರೀರಂಗಪಟ್ಟಣ ತಾಲೂಕಿನ ಗೆಂಡೆಹೊಸಹಳ್ಳಿ ಗ್ರಾಮ ಸಮೀಪದ ಬನ್ನೂರು-ಶ್ರೀರಂಗಪಟ್ಟಣ ಹೆದ್ದಾರಿ ರಸ್ತೆಯಲ್ಲಿ ಬೋರ್‌ವೆಲ್ ಲಾರಿ ಡಿಕ್ಕಿಯಾಗಿ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಗ್ರಾಮದ ಸಿದ್ದಯ್ಯ ಅವರ ಪುತ್ರ ನಾರಾಯಣ(50) ಮೃತಪಟ್ಟವರು.

ತಾಲೂಕಿನ ಮಂಡ್ಯದ ಕೊಪ್ಪಲು ಗ್ರಾಮದ ಕಡೆಯಿಂದ ಸ್ವಗ್ರಾಮ ಗೆಂಡೆಹೊಸಹಳ್ಳಿಗೆ ಬರುತ್ತಿದ್ದ ನಾರಾಯಣ ಅವರ ದ್ವಿಚಕ್ರ ವಾಹನಕ್ಕೆ ಬನ್ನೂರು ಕಡೆಯಿಂದ ಬರುತ್ತಿದ್ದ ಬೋರ್‌ವೆಲ್ ಲಾರಿ ಡಿಕ್ಕಿಯಾಗಿದೆ. ಅಪಘಾತದ ಬಳಿಕ ಚಾಲಕ ರಸ್ತೆ ಮಧ್ಯೆದಲ್ಲೇ ಲಾರಿ ನಿಲ್ಲಿಸಿ ಸ್ಥಳದಿಂದ ಪರಾರಿಯಾಗಿದ್ದಾನೆ. ವಿಷಯ ತಿಳಿದು ಸ್ಥಳಕ್ಕೆ ಅರಕೆರೆ ಠಾಣೆ ಪೊಲೀಸರು ಆಗಮಿಸಿ ಸ್ಥಳ ಪರಿಶೀಲಿಸಿದರು. ಶವವನ್ನು ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದಾರೆ. ಅರಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net