ರಸ್ತೆಯಲ್ಲಿ ಒಕ್ಕಣೆಯಿಂದ ಅವಾಂತರ!

car
Published on

ಮುಳಬಾಗಿಲು: ತಾಲೂಕಿನ ಸುಣಪಕುಂಟೆ ರಸ್ತೆಯಲ್ಲಿ ಭಾನುವಾರ ಒಕ್ಕಣೆ ಮಾಡಿದ್ದ ಹುರಳಿಕಾಯಿ ಮೇಲೆ ಹರಿದ ಕಾರು ಸುಟ್ಟು ಭಸ್ಮವಾಗಿದೆ. ಕಾರಿನಲ್ಲಿದ್ದ ಬೆಂಗಳೂರು ಮೂಲದ ಐವರು ಸ್ವಲ್ಪದರಲ್ಲೇ ಪಾರಾಗಿದ್ದಾರೆ. ರಸ್ತೆಗೆ ಹಾಕಿದ್ದ ಹುರುಳಿಕಾಯಿ ರಾಶಿ ಮೇಲೆ ಕಾರು ಹೋದಾಗ ಒಣಗಿದ ಹುರಳಿ ಬಳ್ಳಿಗಳು ಕಾರಿನ ತಳಭಾಗದಲ್ಲಿ ಸುತ್ತಿಕೊಂಡಿವೆ. ಸೈಲೆನ್ಸರ್​ ಪೈಪ್​ ಬಳಿ ಹೆಚ್ಚಿನ ಶಾಖ ಇದ್ದಿದ್ದರಿಂದ ಬೆಂಕಿ ಹತ್ತಿ ಕ್ಷಣಾರ್ಧದಲ್ಲಿ ಆವರಿಸಿ ಕಾರು ಸುಟ್ಟಿದೆ. ಬೆಂಗಳೂರು ಮೂಲದ ಸಾ ವೇರ್​ ಇಂಜಿನಿಯರ್​ ಹ್ಯಾರನ್​ ಎಂಬುವವರು ಐವರು ಸ್ನೇಹಿತರೊಂದಿಗೆ ಸುನುಪಕುಂಟೆ ಸಮೀಪದ ಗೆಳೆಯ ಅರ್ಜುನ್​ ಎಂಬುವವರ ಮನೆಗೆ ಹೋಗಲೆಂದು ಬಂದಿದ್ದರು. ಕಾರಿನಲ್ಲಿದ್ದ ಐವರು ಮತ್ತು ಸ್ಥಳಿಯರು ಬೆಂಕಿ ನಂದಿಸಲು ಪ್ರಯತ್ನಿಸಿದರೂ ಫಲಕಾರಿಯಾಗಿಲ್ಲ. ಅಗ್ನಿ ಶಾಮಕ ಸಿಬ್ಬಂದಿ ಆಗಮಿಸುವ ವೇಳೆಗೆ ಕಾರು ಸಂಪೂರ್ಣ ಸುಟ್ಟಿದೆ. ಕಾರಿನಲ್ಲಿದ್ದವರಿಗೆ ಯಾವುದೇ ತೊಂದರೆಯಾಗಿಲ್ಲ. ನಂಗಲಿ ಪೊಲೀಸ್​ ಸಬ್​ಇನ್​ಸ್ಪೆಕ್ಟರ್​ ಎಸ್​.ಆರ್​. ಅರ್ಜುನ್​ ಗೌಡ ಸ್ಥಳ ಪರಿಶೀಲಿಸಿದ್ದು, ನಂಗಲಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net