ಫ್ಲೈ ಓವರ್ ಮೇಲೇ ಹಾರಿಹೋದ ಪ್ರಾಣಪಕ್ಷಿ; ಆರೋಪಿ ಚಾಲಕ ಪೊಲೀಸ್ ವಶಕ್ಕೆ..

Scorpio
Published on

ಬೆಂಗಳೂರು: ಫ್ಲೈಓವರ್​ಗಳ ಮೇಲೆ ಸಂಭವಿಸುತ್ತಿರುವ ಅಪಘಾತಗಳ ಸಂಖ್ಯೆ ಏರುತ್ತಿದ್ದು, ಇದೀಗ ಅಂಥ ಪ್ರಕರಣಗಳ ಪಟ್ಟಿಗೆ ಮತ್ತೊಂದು ಅಪಘಾತ ಸೇರಿದೆ. ಬೆಂಗಳೂರಿನ ಯಲಹಂಕ ರೈಲ್ವೆ ಬ್ರಿಡ್ಜ್​ ಮೇಲೆ ಈ ಅಪಘಾತ ಸಂಭವಿಸಿದೆ.

ವೇಗವಾಗಿ ಬಂದ ಸ್ಕಾರ್ಪಿಯೋ ಕಾರ್ ಡಿಕ್ಕಿ ಹೊಡೆದ ಪರಿಣಾಮವಾಗಿ ಫ್ಲೈಓವರ್​ನಲ್ಲಿ ರಸ್ತೆ ದಾಟುತ್ತಿದ್ದ ಪಾದಚಾರಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಆತ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ.

ಸ್ಥಳಕ್ಕೆ ಯಲಹಂಕ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತಕ್ಕೆ ಕಾರಣವಾದ ಚಾಲಕನನ್ನ ವಶಕ್ಕೆ ಪಡೆದ ಪೊಲೀಸರು, ಯಲಹಂಕ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net