ಚಳ್ಳಕೆರೆ ಬಳಿ ಅಪಘಾತದಲ್ಲಿ ನವವಿವಾಹಿತ ಸಾವು

241
Published on

ಚಳ್ಳಕೆರೆ: ನಗರದ ಹೊರವಲಯದ ನಾಯಕನಹಟ್ಟಿ ಕ್ರಾಸ್ ಸಮೀಪದ ಸೇತುವೆ ಬಳಿ ಬುಧವಾರ ಬೈಕ್-ಬೊಲೆರೋ ಡಿಕ್ಕಿಯಾಗಿ ಪತಿ ಮೃತಪಟ್ಟು, ಪತ್ನಿ ಗಾಯಗೊಂಡಿದ್ದಾರೆ.

ಬೈಕ್ ಸವಾರ ಮೊಳಕಾಲ್ಮೂರು ತಾಲೂಕಿನ ನೇರಳಹಳ್ಳಿ ಗ್ರಾಮದ ಸಮೀವುಲ್ಲಾ (22) ಸ್ಥಳದಲ್ಲೇ ಮೃತಪಟ್ಟರೆ, ಹಿಂಬದಿ ಕುಳಿತಿದ್ದ ಪತ್ನಿ ಅಫ್ರೀನಾ ಬಾನು ಗಂಭೀರವಾಗಿ ಗಾಯಗೊಂಡಿದ್ದಾರೆ. ಆಕೆಯನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಫ್ರೀನಾ ಬಾನು ಚಳ್ಳಕೆರೆ ತಾಲೂಕು ಇಮಾಂಪುರದವರು. 20 ದಿನಗಳ ಹಿಂದೆ ಇವರ ವಿವಾಹವಾಗಿತ್ತು ಎಂದು ತಿಳಿದುಬಂದಿದೆ.ನವ ದಂಪತಿ ಹಿರಿಯೂರಿನ ಸಂಬಂಧಿಕರ ಮನೆಗೆ ಬೈಕ್‌ನಲ್ಲಿ ಊಟಕ್ಕೆ ತೆರಳುತ್ತಿದ್ದರು.

ಪೊಲೀಸ್ ಉಪಾಧೀಕ್ಷಕ ಟಿ.ಬಿ. ರಾಜಣ್ಣ ಸ್ಥಳಕ್ಕೆ ಭೇಟಿ ನೀಡಿದ್ದರು. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net