ಕೆದಿಂಜೆಯಲ್ಲಿಬಸ್‌ಗಳ ನಡುವೆ ಡಿಕ್ಕಿ, ಗಾಯ

ACCIDENT
Published on

ಬೆಳ್ಮಣ್: ಕಾಲೇಜು ಬಸ್ ಹಾಗೂ ಎಕ್ಸ್‌ಪ್ರೆಸ್ ಖಾಸಗಿ ಬಸ್ಸುಗಳ ನಡುವೆ ಡಿಕ್ಕಿಯಾದ ಘಟನೆ ಕೆದಿಂಜೆಯಲ್ಲಿ ಇಂದು ಸಂಭವಿಸಿದೆ. ಅದೃಷ್ಟವಶಾತ್ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.. ನಿಟ್ಟೆ ಕಡೆಯಿಂದ ಮಂಗಳೂರಿನತ್ತ ಸಾಗುತ್ತಿದ್ದ ಕಾಲೇಜು ಬಸ್ಸಿನ ಚಾಲಕ ಹಿಂದೆ ಬರುತ್ತಿದ್ದ ವಾಹನವನ್ನು ಗಮನಿಸದೆ ಏಕಾಏಕಿ ಬಲಕ್ಕೆ ತಿರುಗಿಸಿದ ಪರಿಣಾಮ ಹಿಂದಿನಿಂದ ಬಂದ ಬಸ್ಸು ನಿಯಂತ್ರಣ ಕಳೆದುಕೊಂಡು ಕಾಲೇಜು ಬಸ್ಸಿಗೆ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ ಬಸ್ಸುಗಳು ಜಖಂಗೊಂಡಿವೆ. ಖಾಸಗಿ ಬಸ್‌ನಲ್ಲಿದ್ದ ಪ್ರಯಾಣಿಕ ಸಣ್ಣ ಪುಟ್ಟ ಗಾಯಗಳಾಗಿದ್ದು,ಅವರನ್ನು ಖಾಸಗಿ ಆಸ್ಪತ್ರೆ ದಾಖಲಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net