ರಸ್ತೆ ಅಪಘಾತ ವ್ಯಕ್ತಿ ಸಾವು

RVT 1-2
Published on

ರೇವತಗಾಂವ: ಸಮೀಪದ ಉಮರಜ ಗ್ರಾಮದ ನಿವಾಸಿ ಕಾಯಿಪಲ್ಲೆ ತರಲು ಬೈಕ್ ಮೇಲೆ ಚಡಚಣಕ್ಕೆ ತೆರಳಿದ್ದ ವ್ಯಕ್ತಿ ಅಪಘಾತಕ್ಕೀಡಾಗಿ ಮೃತಪಟ್ಟಿದ್ದಾರೆ.
ಗ್ರಾಮದ ಮಲ್ಲಿನಾಥ ಕಲ್ಲಪ್ಪ ದೀಕ್ಷಿತ (58) ಮೃತ ದುರ್ದೈವಿ.

ಶುಕ್ರವಾರ ಬೆಳಗ್ಗೆ ಕಾಯಿಪಲ್ಲೆ ತರಲೆಂದು ಮೊಮ್ಮಗನೊಂದಿಗೆ ಬೈಕ್ ಮೇಲೆ ಚಡಚಣಕ್ಕೆ ಹೊರಟಿದ್ದರು. ನಿವರಗಿ ಸಂಗಮೇಶ್ವರ ದೇವಸ್ಥಾನ ಬಳಿ ಕಂಬ ಹೊತ್ತು ಎದುರಿಗೆ ಬರುತ್ತಿದ್ದ ಟ್ರಾೃಕ್ಟರ್‌ದಲ್ಲಿನ ಕಂಬ ಎದೆಗೆ ಗುದ್ದದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆಯಲ್ಲಿ ಬೈಕ್ ಹಿಂದೆ ಕುಳಿತಿದ್ದ ಮೊಮ್ಮಗ ರೋಹಿತನಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಆತನನ್ನು ವಿಜಯಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಡಚಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net