ವಾಹನ ಅಪಘಾತದಲ್ಲಿ ಇಬ್ಬರು ಸಾವು

25Sambaragi1 CRIME
Published on

ಸಂಬರಗಿ: ಟ್ರಕ್ ಹಿಂದಿಕ್ಕಲು ಹೋದ ಗೂಡ್ಸ್ ವಾಹನವೊಂದು ಅದೇ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಗೂಡ್ಸ್ ವಾಹನದಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಮಹಾರಾಷ್ಟ್ರದ ಮುಚ್ಚಂಡಿ ಗ್ರಾಮದ ಜತ್ತ-ವಿಜಯಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ನಡೆದಿದೆ.

ಸಿಂದಗಿ ತಾಲೂಕಿನ ಕೊಕಟನೂರ ಗ್ರಾಮದ ಮಹಮ್ಮದ್ ಹುಮಸಗಿ (24) ಹಾಗೂ ಇಂಡಿ ತಾಲೂಕಿನ ಪಡನೂರು ಗ್ರಾಮದ ದೀಪಕ ಅರ್ಜುನ ವಡಾರ (23) ಮೃತರು. ಟ್ರಕ್ ಚಾಲಕ ವಿಜಯಪುರದ ಬಸವರಾಜ ಮುಂಜೇನವರ ಗಂಭೀರ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಜತ್ತ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪ್ರಕರಣ ದಾಖಲಿಸಿಕೊಂಡ ಜತ್ತ ಠಾಣೆ ಪೊಲೀಸರು ಮಾಹಿತಿ ನೀಡಿದ್ದಾರೆ. ವಿಜಯಪುರದಿಂದ ಒಣದ್ರಾಕ್ಷಿ ತುಂಬಿಕೊಂಡು ತಾಸ್ಗಾಂವಗೆ ಟ್ರಕ್ ತೆರಳುತ್ತಿತ್ತು. ಹಿಂದೆ ಬಂದ ಗೂಡ್ಸ್ ವಾಹನವು ಟ್ರಕ್ ಹಿಂದಿಕ್ಕಲು ಹೋದಾಗ ಘಟನೆ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net