ಅಂಜೆ ಇಲಾಖೆಯಿಂದ ಅಪಘಾತ ವಿಮೆ

Postoffice
Published on

ಮೈಸೂರು: ಅಂಜೆ ಇಲಾಖೆಯು ಆಕಸ್ಮಿಕ ಅವಘಡಗಳಿಂದ ಸಮಸ್ಯೆ ಎದುರಿಸುವ ಜನಸಾಮಾನ್ಯರಿಗೆ ನೆರವಾಗುವ ದೃಷ್ಟಿಯಿಂದ ಕಡಿಮೆ ಹಣದಲ್ಲಿ ಭಾರಿ ಮೊತ್ತದ ಅಪಘಾತ ವಿಮೆಯನ್ನು ಪರಿಚಯಿಸಿದೆ.


ವಾರ್ಷಿಕ 399 ರೂ.ಗಳನ್ನು ಪಾವತಿಸಿದರೆ, 10 ಲಕ್ಷ ರೂ. ಅಪಘಾತ ವಿಮೆಗೆ ಅರ್ಹರಾಗಿರುತ್ತಾರೆ. ಕನಿಷ್ಠ 18 ರಿಂದ ಗರಿಷ್ಠ 65 ವರ್ಷದೊಳಗಿನವರು ಈ ವಿಮೆಯ ಅನುಕೂಲ ಪಡೆಯಬಹುದಾಗಿದೆ. ಈ ವಿಮೆಯ ಫಲಾನುಭವಿಗಳು ಆಕಸ್ಮಿಕವಾಗಿ ಅಪಘಾತಕ್ಕೆ ತುತ್ತಾದರೆ ಅಥವಾ ಅಂಜೆ ಇಲಾಖೆಯು ಸೂಚಿಸಿರುವ ಅವಘಡದ ಸನ್ನಿವೇಶಗಳಿಗೆ ಒಳಗಾದರೆ ಆರ್ಥಿಕ ನೆರವು ಸಿಗಲಿದೆ.

ಈ ವಿಮಾ ಯೋಜನೆಯ ಫಲಾನುಭವಿ ಆಕಸ್ಮಿಕ ಸಾವನ್ನಪ್ಪಿದ್ದರೆ ಅವರ ಕುಟುಂಬಸ್ಥರಿಗೆ, ಶಾಶ್ವತ ಅಂಗವೈಕಲ್ಯವಾದರೆ ಆರ್ಥಿಕ ಸಹಾಯ ದೊರಕುವುದಲ್ಲದೆ ಆಸ್ಪತ್ರೆಯ ಖರ್ಚು ವೆಚ್ಚಗಳು, ಮೃತರ ಮಕ್ಕಳ ಶಿಕ್ಷಣಕ್ಕಾಗಿ ನೆರವು ದೊರಕಲಿದೆ.
ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಸಮೀಪದ ಅಂಚೆ ಕಚೇರಿ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net